ಕಾಸರಗೋಡು: ಗೋಡೆ ಕುಸಿದು ಕರ್ನಾಟಕದ ಕಾರ್ಮಿಕರಿಬ್ಬರು ಸಾವು

Prasthutha|

ಕಾಸರಗೋಡು: ಕಾಸರಗೋಡು ಮಾರ್ಕೆಟ್‌ ರೋಡ್‌ನ‌ ಪರಿಸರದಲ್ಲಿ ಪೈಪ್‌ಲೈನ್‌ಗಾಗಿ ನೆಲ ಅಗೆಯುತ್ತಿದ್ದಾಗ ಸಮೀಪದ ಗೋಡೆ ಕುಸಿದು ಬಿದ್ದಿದೆ. ಮಣ್ಣಿನಡಿಗೆ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗದೇ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಸಾವೀಗೀಡಾಸ ಇಬ್ಬರು ಕಾರ್ಮಿಕರು ಕರ್ನಾಟಕದ ಚಿಕ್ಕಮಗಳೂರು ಮೂಲದ ಬಾಸಯ್ಯ (40) ಮತ್ತು ಕೊಪ್ಪಳ ಮೂಲದ ಲಕ್ಷ್ಮಪ್ಪ (43).

- Advertisement -

ಸರ್ಕಲ್‌ ಇನ್‌ಸ್ಪೆಕ್ಟರ್‌ ಪಿ. ಅಜಿತ್‌ ಕುಮಾರ್‌ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮೇಲೆತ್ತಿದ್ದಾರೆ. ವಿಷಯ ತಿಳಿದ ಮೃತರ ಸಂಬಂಧಿಕರ ರೋದನ ಮುಗಿಳುಮುಟ್ಟಿದೆ.




Join Whatsapp