ಕಾಸರಗೋಡು: ಅಂಗಳದಲ್ಲಿ ಆಡುತ್ತಿದ್ದ ಪುಟ್ಟ ಮಗುವನ್ನು ಎಳೆದೊಯ್ದ ಬೀದಿನಾಯಿಗಳು

Prasthutha|

ಕಾಸರಗೋಡು: ಮನೆಯ ಪ್ರವೇಶ ದ್ವಾರದ ಬಳಿ ಹೊರಗಡೆ ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿ ನಾಯಿಗಳ ಹಿಂಡು ಕಚ್ಚಿ ಎಳೆದುಕೊಂಡು ಹೋದ ಆಘಾತಕಾರಿ ಘಟನೆ ಕಾಸರಗೋಡು ಸಮೀಪ ನಡೆದಿದೆ.

- Advertisement -

ಪಡನ್ನ ವಡಕ್ಕೇಪುರತ್ತ್ ಮಣ್ಣಾತಿಗೆಯ ಫಾಬಿನಾ – ಸುಲೈಮಾನ್‌ ದಂಪತಿ ಪುತ್ರ, ಒಂದೂವರೆ ವರ್ಷ ವಯಸ್ಸಿನ ಬಶೀರ್‌ ನಾಯಿಗಳ ದಾಳಿಗೊಳಗಾದ ಮಗು.

ಮಗುವಿನ ಆರ್ಭಟ ಕೇಳಿ ಮನೆಯಿಂದ ಓಡಿಬಂದ ಆಲಿಸಿದವರಿಗೆ ಹೃದಯವಿದ್ರಾವಕ ದೃಶ್ಯ ಕಂಡುಬಂದಿದ್ದು, ಅವರನ್ನು ನೋಡಿದ ನಾಯಿಗಳು ಪರಾರಿಯಾಗಿವೆ.

- Advertisement -

ಮಗುವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ

ಇದೇ ಪ್ರದೇಶದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆಯನ್ನು ಕಚ್ಚಿ ಗಾಯಗೊಳಿಸಿವೆ.

Join Whatsapp