ಕಾಸರಗೋಡಿನ ನಟಿ ಅನುಮಾನಾಸ್ಪದ ಸಾವು: ಪತಿ ವಶಕ್ಕೆ !

Prasthutha|

ಕಲ್ಲಿಕೋಟೆ: ಕಾಸರಗೋಡು ಮೂಲದ ಮಾಡೆಲ್​ ಹಾಗೂ ನಟಿಯೊಬ್ಬರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಪತ್ತೆಯಾಗಿದೆ.

- Advertisement -

ಶಹನಾ (20) ಮೃತ ನಟಿ ಎಂದು ತಿಳಿದು ಬಂದಿದೆ. ಶಹನಾ ಕಾಸರಗೋಡಿನ ಚೆರ್ವತ್ತೂರು ಮೂಲದ ನಿವಾಸಿಯಾಗಿದ್ದು,  ಕಳೆದ ರಾತ್ರಿ ಕಲ್ಲಿಕೋಟೆಯ ಬಾಡಿಗೆ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ.

- Advertisement -

ಶಹನಾ ಒಂದೂವರೆ ವರ್ಷಗಳ ಹಿಂದೆ ಸಜ್ಜಾದ್ ರನ್ನು ಮದುವೆ ಆಗಿದ್ದರು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಿಂದೊಮ್ಮೆ ಕೊಲೆ ಮಾಡುವುದಾಗಿ ಸಜ್ಜಾದ್​ ಬೆದರಿಕೆ ಹಾಕಿದ್ದ. ಆಕೆಯ ಸಾವಿನ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು, ಗಂಡ ಸಜ್ಜಾದ್​ ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Join Whatsapp