ಕಾರವಾರ: ಮುಸ್ಲಿಂ ಧಾರ್ಮಿಕ ಶ್ರದ್ಧಾಳುಗಳ ರೀತಿ ವೇಷ ಧರಿಸಿ ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದು ಬಂಡವಾಳ ಬಯಲುಗೊಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ವಶಕ್ಕೆ ಪಡೆದ ಖಾಕಿ ವಿಚಾರಣೆ ನಡೆಸಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರದಲ್ಲಿ ಈ ಘಟನೆ ನಡೆದಿದೆ.
ಮುಂಬೈ ಮೂಲದ ಅರುಣ್ ಮತ್ತು ವಿಷ್ಣು ಎಂಬುವವರು ಮುಸ್ಲಿಂ ವೇಷ ಧರಿಸಿಕೊಂಡು ಮನೆ ಮನೆಗೆ ಹೋಗಿ ಕಷ್ಟ ಹೇಳಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು. ಇವರ ವರ್ತನೆಯಲ್ಲಿ ಏನೋ ಅಸಹಜತೆ ಕಂಡ ದಾದಾಪೀರ್ ಎನ್ನುವವರು ಇತರರೊಂದಿಗೆ ಸೇರಿ ಪ್ರಶ್ನಿಸಿದಾಗ ಇಬ್ಬರ ಅಸಲಿಯತ್ತು ಬಯಲಾಗಿದೆ. ಸ್ಥಳಕ್ಕೆ ಬಂದ ದಾಂಡೇಲಿ ಪೊಲೀಸರಿಗೆ ಇಬ್ಬರನ್ನು ಒಪ್ಪಿಸಲಾಗಿದೆ.