ಮಡಿಕೇರಿ: ಗುಂಡಿ ಮುಚ್ಚುವ ಕಾರ್ಯದಲ್ಲಿ ಅವ್ಯವಹಾರದಲ್ಲಿ ಇಂಜಿನಿಯರ್ ಗಳು ಮತ್ತು ಗುತ್ತಿಗೆದಾರರ ಕೈವಾಡ ನಡೆಯುತ್ತಿದೆ ಎಂದು ಕರವೇ ಆರೋಪಿಸಿದೆ.
ಈ ಕುರಿತು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರ ಮನವಿ ಸಲ್ಲಿಸಿದರು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯಿಂದ ಹಾಲೇರಿವರೆಗೆ ರಸ್ತೆಯ ಗುಂಡಿಗಳ ಮುಚ್ಚುವ ಕೆಲಸಕ್ಕೆ ಸರ್ಕಾರದಿಂದ ಲಕ್ಷಾಂತರ ಹಣ ಬಂದಿದ್ದರು. ಈ ಹಣ ಗುತ್ತಿಗೆದಾರರ ಪಾಲಾಗುತ್ತಿದೆ . ಈ ರಸ್ತೆಗಳನ್ನು ನೋಡಿಕೊಳ್ಳಲೆಂದು ಇಂಜಿನಿಯರ್ ಗಳಿಗೆ ನೇಮಿಸಿರುತ್ತಾರೆ.
ಆದರೆ ಲೋಕೋಪಯೋಗಿ ಇಂಜಿನಿಯರ್ ಗಳು ಇದನ್ನೆಲ್ಲ ಮರೆತು ಗುತ್ತಿಗೆದಾರು ಕೆಲಸ ಮಾಡದಿದ್ದರೂ ಅವರಿಗೆ ಬಿಲ್ ಪಾವತಿಸುವ ಕೆಲಸ ನಡೆಯುತ್ತಿದೆ ಕರವೇ ಕಾರ್ಯಕರ್ತರು ಆರೋಪಿಸಿದ್ದಾರೆ. ಸರಿಯಾಗಿ ಗುಂಡಿ ಮುಚ್ಚುವ ಕೆಲಸ ಎಲ್ಲೂ ಆಗಿಲ್ಲ. ಹಾಗಾಗಿ ಇವರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮತ್ತು ಕೊಡಗು ಲೋಕೋಪಯೋಗಿ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದಾರೆ. ಇನ್ನೂ ಸರಿಪಡಿಸದಿದ್ದರೆ ಲೋಕಾಯುಕ್ತಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ದೂರು ಕೊಡಲು ಮುಂದಾಗುತ್ತೇವೆ ಎಂದು ಕರವೇ ಕಾರ್ಯಕರ್ತರು ಎಚ್ಚರಿಕೆ ನೀಡಿದರು.