ಹಿಜಾಬ್ ಹಾಕಿದರೆ ಕಿವಿ ಕೇಳುವುದಿಲ್ಲ ..! ಸೊಗಡು ಶಿವಣ್ಣ ವಿಚಿತ್ರ ಹೇಳಿಕೆ !

Prasthutha|

ಬೆಂಗಳೂರು: ಶಿರವಸ್ತ್ರ- ಕೇಸರಿ ಶಾಲು ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಚಿತ್ರ- ವಿಚಿತ್ರ ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ‘ ಹಿಜಾಬ್ ಹಾಕಿದರೆ ವಿದ್ಯಾರ್ಥಿಗಳಿಗೆ ಕಿವಿ ಕೇಳುವುದಿಲ್ಲ, ಇನ್ನು ಹೇಗೆ ಪಾಠ ಮಾಡುವುದು ಎಂದು ಪ್ರಶ್ನಿಸಿದ್ದಾರೆ.
ಶಿಯಾ – ಸುನ್ನಿ ಮುಸ್ಲಿಮರ ಜಗಳದಿಂದಾಗಿ ಇಸ್ಲಾಂ ಧರ್ಮದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಮತ್ತೊಂದು ವಿವಾದಾತ್ಮಕ ಹಾಗೂ ವಿಚಿತ್ರ ಹೇಳಿಕೆಯನ್ನು ಸೊಗಡು ನೀಡಿದ್ದಾರೆ.
ಭಾರತ ದೇಶದಲ್ಲಿ ಮೊಘಲರು ವಿಷ ಬೀಜವನ್ನು ಬಿತ್ತಿ ಹೋಗಿದ್ದಾರೆ. ಮೊಘಲರು ಭಾರತಕ್ಕೆ ಕಾಲಿಡುವ ಮೊದಲು ಭಾರತದಲ್ಲಿ ಇಸ್ಲಾಮ್ ಧರ್ಮದವರು ಇರಲೇ ಇಲ್ಲ ಎಂದು ಇತಿಹಾಸದ ಅರಿವೇ ಇಲ್ಲದಂತೆ ಮಾತನಾಡಿದ್ದಾರೆ



Join Whatsapp