ಧಾರವಾಡದ ಹಿರಿಯಜ್ಜ ತಮ್ಮ 89ನೇ ಇಳಿವಯಸ್ಸಿನಲ್ಲಿ ಪಿ.ಎಚ್.ಡಿ ಪದವಿ ಪಡೆದುಕೊಳ್ಳುವ ಮೂಲಕ, ರಾಜ್ಯದ ಮೊದಲ ಹಿರಿ ವಯಸ್ಸಿನ ಪಿ.ಎಚ್.ಡಿ ಪದವೀಧರ ಎಂಬ ಹೆಗ್ಗಳ್ಳಿಕೆಗೆ ಪಾತ್ರರಾಗಿದ್ದಾರೆ.
ಜಯನಗರದಲ್ಲಿರುವ ಮಾರ್ಕಂಡೇಯ ದೊಡಮನಿ ಎಂಬವರು ತಮ್ಮ 89ನೇ ವಯಸ್ಸಿನಲ್ಲಿ ಪಿಹೆಚ್ ಡಿ ಮುಗಿಸಿ ಇದೀಗ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದಲ್ಲಿ ನೂರಾರು ಜನ ಶಿವಶರಣರ ಬಗ್ಗೆ ಅಧ್ಯಯನ ಮಾಡಿ ಪಿಎಚ್ ಡಿ ಮಾಡಿದ್ದಾರೆ. ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಇಳಿ ವಯಸ್ಸಿನ ವೃದ್ಧರೊಬ್ಬರು ಪಿಎಚ್ ಡಿ ಪದವಿಯನ್ನ ಪಡೆದುಕೊಂಡಿರುವುದು. ಡೋಹರ ಕಕ್ಕಯ್ಯನವರು ಬರೆದ ಕೇವಲ 6 ವಚನಗಳನ್ನು ಮುಂದಿಟ್ಟುಕೊಂಡು 150 ಪುಟಗಳುಳ್ಳ “ಶಿವಶರಹಣ ಡೋಹರ ಕಕ್ಕಯ್ಯ” ಒಂದು ಅಧ್ಯಯನ ಎಂಬ ಮಹಾ ಪ್ರಬಂಧವನ್ನು ಅವರು ಬರೆದಿದ್ದು, ಸತತ 18 ವರ್ಷಗಳಿಂದ ಕಕ್ಕಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.