ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತೆ: ಪ್ರಚೋದನಕಾರಿ ಹೇಳಿಕೆ ನೀಡಿದ ಆಂದೋಲಶ್ರೀ

Prasthutha|

ಯಾದಗಿರಿ: ಹಿಂದೂಗಳನ್ನು ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತೆ ಎಂದು ಆಂದೋಲಶ್ರೀ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

- Advertisement -


ಯಾದಗಿರಿಯಲ್ಲಿ ನಡೆದ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಆಂದೋಲಶ್ರೀ ಎರಡು ಬಾರಿ ಹೊಡೆದರೆ ಎರಡು ತುಂಡು ಆಗ್ತೀರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಹಿಂದೂಗಳನ್ನು ಕೆಣಕಬೆಡಿ, ಕೆಣಕಿದ್ರೆ ಕರ್ನಾಟಕ ಎರಡನೇ ಗೋದ್ರಾ ಆಗುತ್ತದೆ. ಹಿಂದೂಗಳ ಮೇಲೆ ಟಾರ್ಗೆಟ್ ಮಾಡುತ್ತಿದ್ರು, ಇಲ್ಲಿ ನರಸತ್ತ ಸರ್ಕಾರವಿದೆ. ಕ್ರಮಕೈಗೊಳ್ಳಲು ಮುಂದೆ ಬರುತ್ತಿಲ್ಲ. ಹಿಂದೂ ಜಾಗೃತನಾದರೆ ಭಾರತ ಉಳಿಯಲು ಸಾಧ್ಯ. 2024ರಲ್ಲಿ ಮತ್ತೆ ಮೋದಿ ಅವರನ್ನು ಪಿಎಂ ಮಾಡಬೇಕು. ಮೋದಿ ಇಲ್ಲದೇ ಭಾರತವಿಲ್ಲ ಯತ್ನಾಳ್ ಇಲ್ಲದೇ ಕರ್ನಾಟಕವಿಲ್ಲ ಎಂದು ಹೇಳಿದ್ದಾರೆ.

Join Whatsapp