ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ಬಲಿ: ಸರಕಾರದ ನಿರ್ಲಕ್ಷವೇ ಈ ಸಾವಿಗೆ ನೇರ ಕಾರಣ: SDPI

Prasthutha|

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಕರ್ನಾಟಕ ಮೂಲದ ನವೀನ್ ಎಂಬ ವಿದ್ಯಾರ್ಥಿಯು ಸಾವನ್ನಪ್ಪಿದ ಸುದ್ದಿಯು ನೋವುಂಟು ಮಾಡಿದ್ದು, ಈ ವಿದ್ಯಾರ್ಥಿಯನ್ನೊಳಗೊಂಡ ಇತರ ಭಾರತೀಯ ವಿದ್ಯಾರ್ಥಿಗಳನ್ನು ಮರಳಿಸುವಲ್ಲಿ ಸರಕಾರ ತೋರಿದ ನಿರ್ಲಕ್ಷ್ಯತನ, ನಿರಾಸಕ್ತಿಯೇ ಈ ವಿದ್ಯಾರ್ಥಿಯ ಸಾವಿಗೆ ಕಾರಣ. ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ.

- Advertisement -

ಯುದ್ಧ ಪೀಡಿತ ಉಕ್ರೇನ್ ನಲ್ಲಿ ಇತರ ದೇಶದ ಸರಕಾರವು, ತಮ್ಮ ಪ್ರಜೆಗಳನ್ನು ಸುಭದ್ರವಾಗಿ ರಕ್ಷಿಸುವಾಗ ನಮ್ಮ ದೇಶದ ಸರಕಾರ ಮಾತ್ರ ನಿದ್ರೆಗೆ ಜಾರಿತ್ತು. ‘ನಮ್ಮನ್ನು ದೇಶಕ್ಕೆ ಮರಳಿಸಿ, ರಕ್ಷಿಸಿ’ ಎಂದು ಎಷ್ಟು ಅಂಗಲಾಚಿದರೂ ಅಲ್ಲಿರುವ ಎಲ್ಲಾ ಭಾರತೀಯ ಹಾಗೂ ಕರ್ನಾಟಕ ಮೂಲದ ವಿದ್ಯಾರ್ಥಿಗಳನ್ನು ಮರಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ವಿಫಲಗೊಂಡಿದೆ. ಈ ಕಾರಣದಿಂದ ಕರ್ನಾಟಕ ಮೂಲದ ಒಂದು ಜೀವವು ಅಸುನೀಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

‘ಮೋದಿ ಹಸ್ತಕ್ಷೇಪ ಮಾಡಿದರೆ ಕದನ ವಿರಾಮವಾಗುತ್ತದೆ’ ಎಂದು ಇತ್ತೀಚೆಗೆ ಕರ್ನಾಟಕದ ಕೆಲ ಮುಖ್ಯವಾಹಿನಿಯ ಮಾಧ್ಯಮಗಳು ಬಿಂಬಿಸಿದ ಮಹಾ ಪುರುಷ , ಪ್ರಧಾನಿ ನರೇಂದ್ರ ಮೋದಿ, ಉಕ್ರೆನ್ ನಲ್ಲಿರುವ ತನ್ನದೇ ದೇಶದ ವಿದ್ಯಾರ್ಥಿಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ. ವಿದ್ಯಾರ್ಥಿಗಳಿಗೆ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ.

- Advertisement -

ಮೃತ ಪಟ್ಟ ವಿದ್ಯಾರ್ಥಿಯ ಕಳೇಬರವನ್ನು ಆತನ ಕುಟುಂಬಕ್ಕೆ ಮರಳಿಸಲು ಕ್ರಮಕೈಗೊಳ್ಳಬೇಕು ಹಾಗೂ ಆ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು. ಈ ಕೂಡಲೇ ಅಲ್ಲಿ ಉಳಿದಿರುವ ಎಲ್ಲಾ ಅನಿವಾಸಿ ಭಾರತೀಯರನ್ನು ರಕ್ಷಿಸಿ, ದೇಶಕ್ಕೆ ಮರಳಿಸಬೇಕು ಎಂದು ಅಬ್ದುಲ್ ಮಜೀದ್ ಮೈಸೂರು ಆಗ್ರಹಿಸಿದ್ದಾರೆ.

Join Whatsapp