ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಸೋಲಿಸಲು ಕರ್ನಾಟಕ ತಂತ್ರವೇ ನಮಗೆ ಮಾದರಿ: ರಾಹುಲ್ ಗಾಂಧಿ

Prasthutha|

‘ಪ್ರತಿಪಕ್ಷಗಳು ಸರಿಯಾಗಿ ಹೊಂದಾಣಿಕೆಯಾದರೆ ಬಿಜೆಪಿಯನ್ನು ಸೋಲಿಸಬಹುದು’

- Advertisement -


ನವದೆಹಲಿ: ಮುಂದಿನ ಲೋಕಸಭಾ, ವಿಧಾನಸಭಾ ಚನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಕರ್ನಾಟಕದ ತಂತ್ರವೇ ನಮಗೆ ಮಾದರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.


ಅಮೆರಿಕದ ಸಾಂತಾ ಕ್ಲಾರಾದ ಕ್ಯಾಲಿಫೋರ್ನಿಯಾ ವಿವಿ ಕ್ಯಾಂಪಸ್ ನಲ್ಲಿ ನಡೆದ ಸಮಾರಂಭದಲ್ಲಿ ಸಭಿಕರೊಂದಿಗೆ ಸಂವಾದ ನಡೆಸಿದ ಗಾಂಧಿ, ಬಿಜೆಪಿಯಲ್ಲಿನ ದೌರ್ಬಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಒಬ್ಬ ರಾಜಕೀಯ ನಿಪುಣನಾಗಿ ನನಗೆ ಅವರ ದೌರ್ಬಲ್ಯ ಎದ್ದು ಕಾಣುತ್ತಿವೆ. ಪ್ರತಿಪಕ್ಷಗಳು ಸರಿಯಾಗಿ ಹೊಂದಾಣಿಕೆಯಾದರೆ ಬಿಜೆಪಿಯನ್ನು ಸೋಲಿಸಬಹುದು ಎಂದರು.

- Advertisement -


2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಬೇಕು. ಜತೆಗೆ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ದೇಶಕ್ಕೆ ಪರ್ಯಾಯ ದೃಷ್ಟಿಕೋನದ ಅಗತ್ಯವಿದೆ. ಪ್ರತಿಪಕ್ಷಗಳ ಏಕತೆಯ ವಿಷಯದಲ್ಲಿ, ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.

Join Whatsapp