►ಲ್ಯಾಂಡ್ ಆಗಿರುವ ವಿಕ್ರಂ ನಲ್ಲಿದೆ ಕ್ರಯೋಜನಿಕ್ ಸೆನ್ಸರ್
ಬೆಳಗಾವಿ: ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ3 ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿದೆ. ಜುಲೈ 14 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಚಂದ್ರಯಾನ-3ಯನ್ನು ಉಡಾವಣೆ ಮಾಡಿತ್ತು. ಇದೀಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ.
ಚಂದ್ರನ ಕಡೆಗೆ 34 ದಿನಗಳ ಸುದೀರ್ಘ ಪ್ರಯಾಣದ ನಂತರ ಇದೀಗ ಲ್ಯಾಂಡ್ ಆಗಿದ್ದು, ಇಡೀ ಭಾರತೀಯರು ಹೆಮ್ಮೆಪಡುವಂತೆ ಮಾಡಿದೆ. ಜೊತೆಗೆ ಇದರಲ್ಲಿ ಕರ್ನಾಟಕದ ವಿಜ್ಞಾನಿ ನೀಡಿದ ಸೆನ್ಸರ್ ಕೂಡ ಅಳವಡಿಸಲಾಗಿದ್ದು, ಮತ್ತೊಂದು ಹೆಮ್ಮೆಯ ವಿಷಯವಾಗಿದೆ.
ಕ್ರಯೋಜನಿಕ್ ಸೆನ್ಸರ್ ಸಿದ್ದ ಪಡಿಸಿ ಚಂದ್ರಯಾನ-3ಗೆ ನೀಡಿದ್ದ ಕರ್ನಾಟಕದ ವಿಜ್ಞಾನಿ ದೀಪಕ್ ಧಡೂತಿ
ಚಂದ್ರಯಾನ ಯಶಸ್ವಿ ಲ್ಯಾಂಡಿಗ್ನಲ್ಲಿ ಕರ್ನಾಟಕದ ಬೆಳಗಾವಿ ಮೂಲದ ವಿಜ್ಞಾನಿ ನೀಡಿದ ಸೆನ್ಸರ್ ಕೂಡ ಪ್ರಮುಖ ಪಾತ್ರ ವಹಿಸಿದೆ. ಈ ಹಿಂದೆ ಅಮೇರಿಕಾದಲ್ಲಿದ್ದ ವಿಜ್ಞಾನಿ ದೀಪಕ್ ಧಡೂತಿ ಅವರು ಅಬ್ದುಲ್ ಕಲಾಂ ಅವರ ಪ್ರೇರಣೆಯಿಂದ ಭಾರತಕ್ಕೆ ಬಂದು, ಬೆಳಗಾವಿಯಲ್ಲಿ ತಮ್ಮದೇ ಆದ ಸರ್ವೋಕಂಟ್ರೊಲ್ಸ್ ಏರೋಸ್ಪೇಸ್ ಮತ್ತು ಟೆಕ್ನಾಲಜಿ ಪ್ರಾ.ಲಿ ಎಂಬ ಹೆಸರಿನ ಸ್ವಂತ ಕಂಪನಿಯನ್ನು ಸ್ಥಾಪಿಸಿ ಎಂಡಿ ಕೂಡ ಆಗಿದ್ದಾರೆ.
ಲ್ಯಾಂಡ್ ಆಗಿರುವ ವಿಕ್ರಂ ನಲ್ಲಿದೆ ಕ್ರಯೋಜನಿಕ್ ಸೆನ್ಸರ್
ಕಳೆದ ಇಪ್ಪತ್ತು ವರ್ಷದಿಂದ ಬೆಳಗಾವಿಯಲ್ಲಿ ತಮ್ಮದೆ ಕಂಪನಿ ನಡೆಸುತ್ತಿರುವ ವಿಜ್ಞಾನಿ ದೀಪಕ್ ಧಡೂತಿಯವರು ಸ್ಥಾಪಿಸಿದ ಈ ಕಂಪನಿಯಲ್ಲಿ ಸೆನ್ಸರ್ಗಳನ್ನು ಸಿದ್ದಪಡಿಸುತ್ತಾರೆ. ಚಂದ್ರಯಾನ-3ಗೆ ಕ್ರಯೋಜನಿಕ್ ಸೆನ್ಸರ್ ಸ್ಪೇಸ್ ಹೆಸರಿನ ಸೆನ್ಸರ್ ಸಿದ್ದಪಡಿಸಿ ಎರಡು ವರ್ಷದ ಹಿಂದೆ ನೀಡಿದ್ದರು. ಇದನ್ನು ಸೊಲಾರ್ ಪ್ಯಾನಲ್ ಎನರ್ಜಿ ಸಲುವಾಗಿ ಮತ್ತು ವಿಕ್ರಮ್ನ ಮೊಮೆಂಟ್ ಕಂಟ್ರೋಲ್ಸೆನ್ನಲ್ಲಿ ಇದನ್ನು ಬಳಕೆ ಮಾಡುತ್ತಾರೆ.