ಕರ್ನಾಟಕ ರಾಜ್ಯೋತ್ಸವ ಕನ್ನಡ ನಾಡು-ನುಡಿ ಮತ್ತು ಸಾಮಾಜಿಕ ನ್ಯಾಯ

Prasthutha|

ನಂ 1 ಕನ್ನಡಿಗರಾಗಿ, ನವೆಂಬರ್ ಕನ್ನಡಿಗರಾಗಬೇಡಿ! ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ!
ಮೊದಲ ಡೈಲಾಗು ಸಾಮಾಜಿಕ ನ್ಯಾಯಕ್ಕಾಗಿ ಬಡಿದಾಡುತ್ತಿರುವವರು ಕನ್ನಡಪರ ಸಂಘಟನೆಗಳನ್ನು ಚುಚ್ಚುವ ಪರಿಯಾದರೆ, ಎರಡನೆ ಡೈಲಾಗು ಕನ್ನಡಪರ ಬಡಿದಾಡುತ್ತಿರುವವರು ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಇರಿಯುವ ಪರಿಯಾಗಿದೆ. ಈ ಎರಡು ಕೂಡ ಜೊತೆಯಾಗದೆ ರೈಲ್ವೆ ಕಂಬಿಗಳಂತೆ ಅಕ್ಕ ಪಕ್ಕದಲ್ಲೆ ಸಾಗುತ್ತಿವೆ ನಡುವೆ ಅಂತರ ಕಾಪಾಡಿಕೊಂಡು. ಹಾಗಾದರೆ ನಮ್ಮನ್ನು ಕಂಬಿ ಮಾಡಿಕೊಂಡಿರುವ ರೈಲುಗಳು ಯಾವುವು? ಮುಖ್ಯವಾಗಿ ಮೂರು ರೈಲು ಓಡಲು ನಮ್ಮನ್ನು ಕಂಬಿಗಳಾಗಿಸಿಕೊಂಡಿದ್ದಾರೆ.

- Advertisement -

ಮೊದಲ ರೈಲಿನ ಹೆಸರು ಕೇಂದ್ರೀಕರಣ.
ಇದರ ಬೋಗಿಗಳು ರಾಷ್ಟ್ರವಾದ, ದೇಶಭಕ್ತಿ, ಅಖಂಡ ಭಾರತ, ಹಿಂದುಸ್ತಾನ-ಪಾಕಿಸ್ತಾನ, ಚೀನಾಗಿಂತ ಭಾರತ ಗ್ರೇಟು, ವಿಶ್ವ ಗುರು… ಇತ್ಯಾದಿಗಳು.
ಎರಡನೆ ರೈಲು ಬ್ರಾಹ್ಮಣೀಕರಣ: ಇದರ ಬೋಗಿಗಳು ಹಿಂದು ಮುಸ್ಲಿಂ, ಮತಾಂತರ, ಲವ್ ಜಿಹಾದ್, ಹಿಂದಿ ರಾಷ್ಟ್ರ ಭಾಷೆ, ಸಂಸ್ಕೃತ ದೇವ ಭಾಷೆ, ತಮಿಳರ ಮೇಲೆ ದ್ವೇಷ, ಉರ್ದು ಮೇಲೆ ದ್ವೇಷ, ಬಾಡೂಟ-ಸೊಪ್ಪೂಟ, ಯೋಗಾ ಡೇ… ಇತ್ಯಾದಿ.
ಇನ್ನು ಮೂರನೆ ರೈಲು ವ್ಯಾಪಾರೀಕರಣ: ಇದರ ಬೋಗಿಗಳು ಖಾಸಗಿ ಶಿಕ್ಷಣ ವ್ಯವಸ್ಥೆ, ಖಾಸಗಿ ಆರೋಗ್ಯ ವ್ಯವಸ್ಥೆ, ರಿಯಲ್ ಎಸ್ಟೇಟ್, ದುಬಾರಿ ಸಾರ್ವಜನಿಕ ಸಾರಿಗೆ, ನಾಮ್ಕಾವಸ್ತೆ ನ್ಯಾಯಬೆಲೆ ಅಂಗಡಿಗಳು ಇತ್ಯಾದಿ.


ಈ ರೈಲುಗಳನ್ನು ವಿಕೃತ ಖುಷಿಯಿಂದ ಓಡಿಸುತ್ತಿರುವವರು ಬ್ರಾಹ್ಮಣರು, ರೈಲಿನಲ್ಲಿ ಆರಾಮವಾಗಿ ಕುಳಿತಿರುವವರು ನಾರ್ತ್ ಹಿಂದಿಯನ್ಸ್, ಸೇಠುಗಳು. ಇವರಿಬ್ಬರ ಗುಲಾಮಗಿರಿ ಮಾಡುತ್ತಿರುವವರು ದೇವರು ಧರ್ಮ ಜಾತಿ ಹೆಸರಲ್ಲಿ ಯಾಮಾರಿರುವ ಕೇಸರಿ ಸಂಘಿಗಳು ಮತ್ತು ಬೇರೆ ಬೇರೆ ಬಣ್ಣದ ಮರೆಯಲ್ಲಿರುವ ಗುಪ್ತ ಸಂಘಿಗಳು.

- Advertisement -


ಐರಿಷ್ ಗಾದೆ ಹೇಳುತ್ತದೆ ‘in our togetherness castles are built ಎಂದು, ‘ಅಂದರೆ ನಮ್ಮ ಒಗ್ಗೂಡುವಿಕೆಯಿಂದ ಕೋಟೆಗಳನ್ನೇ ಕಟ್ಟಬಹುದು’ ಎಂದು. ಈ ರೈಲುಗಳು ಓಡಲು ಅವಕಾಶ ಇಲ್ಲದಂತೆ, ಕಂಬಿಗಳಾಗಿರುವ ನಾವುಗಳು ಒಗ್ಗೂಡಿ ಮನುಷ್ಯರಾಗಬೇಕಿದೆ. ಮನುಷ್ಯರಾಗಿ ರಾಷ್ಟ್ರೀಯ ವಾದಕ್ಕೆ ಬಲಿಯಾಗಿರುವ ಕರ್ನಾಟಕವನ್ನು ಬಲಿಷ್ಠ ಪ್ರಾದೇಶಿಕತೆಯ ಕನ್ನಡ ನಾಡು ಕೋಟೆ ಕಟ್ಟಬೇಕಿದೆ.
ಜೊತೆಗೂಡಿಸಲು 2021ರ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮಗಳು ‘ಕರ್ನಾಟಕ ಸಾಕು ಕನ್ನಡ ನಾಡು ಬೇಕು’ ಎನ್ನುತ್ತಾ ಈ ಕೆಳಗಿನ 5 ವಿಚಾರಗಳನ್ನು ಮಾತನಾಡಲಿವೆ, ಜನ ಸಾಮಾನ್ಯರನ್ನು ಎಚ್ಚರಿಸಲಿವೆ.

  1. ಕನ್ನಡ ನಾಡಿನ ಎಲ್ಲಾ ಜಾತಿಯ ಸ್ವಂತ ಮನೆಯಿಲ್ಲದ ಬಡವರಿಗೆ, ಭಾರತ ಒಕ್ಕೂಟ ಸರ್ಕಾರ ನಮ್ಮ ಜಿಎಸ್‌ಟಿ ದುಡ್ಡಲ್ಲಿ ಉಚಿತವಾಗಿ ಸೈಟು -ಮನೆ ಕಟ್ಟಿಸಿಕೊಡಬೇಕು.
  2. ಸಂವಿಧಾನದ ಆರ್ಟಿಕಲ್ 343ರಿಂದ 351ರ ವರೆಗೆ ತಿದ್ದುಪಡಿ ಮಾಡಿ, ಸಂಸ್ಕೃತ ಮತ್ತು ಹಿಂದಿಗೆ ಇರುವ ವಿಶೇಷ ಸ್ಥಾನಮಾನ ತೆಗೆಯಬೇಕು.
  3. ಕನ್ನಡ ನಾಡಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ರೈಲ್ವೇ ಪ್ರಯಾಣ ಮತ್ತು ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು.
  4. ನಾಡದ್ರೋಹಿ, ರಾಷ್ಟ್ರೀಯ ಶಿಕ್ಷಣ ನೀತಿ -ಎನ್‌ಇಪಿ ಸಂಪೂರ್ಣ ರದ್ದು ಮಾಡಬೇಕು.
  5. ಕನ್ನಡ ನಾಡೊಳಗೆ ಓಡಾಡುವ ಯಾವುದೇ ರಸ್ತೆಗಳಲ್ಲಿ ಟೋಲ್ ವಸೂಲಾತಿ ಮಾಡಬಾರದು.

ಸಾಮಾಜಿಕ ನ್ಯಾಯದ ಪರ ಇರುವ ಚಳುವಳಿ ಮತ್ತು ಕನ್ನಡ ನಾಡು-ನುಡಿ ಪರ ಇರುವ ಚಳುವಳಿ ಒಗ್ಗೂಡುವ ವಿಚಾರದಲ್ಲಿ ಹೆನ್ರಿ ಫೋರ್ಡ್‌ ನ ‘Coming Together Is a Beginning -ಜೊತೆಯಾಗುವುದೆ ಆರಂಭ) Is a Keeping together is a progress (ಜೊತೆಯಲ್ಲಿಯೇ ಇರುವುದು ಬೆಳವಣಿಗೆ) working together is a success (ಜೊತೆಯಾಗಿ ಕೆಲಸ ಮಾಡುವುದೆ ಯಶಸ್ಸು) ಈ ಮಾತನ್ನು ನಿರಂತರ ನೆನೆಯೋಣ ಜೊತೆಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಈ ಮಾತುಗಳನ್ನು ಗಂಭೀರವಾಗಿ ಆಲೋಚಿಸಬೇಕಿದೆ


ಕನ್ನಡ ಚಳುವಳಿ ತಮಿಳು ಚಳುವಳಿಯಂತೆ ಶೂದ್ರ ಆಂದೋಲನದ ಸ್ವರೂಪ ತಳೆಯದೆ ಹೋಯಿತು.
ತಮಿಳು ಆಂದೋಲನವಾದರೂ ಆರ್ಯರ ವಿರುದ್ಧ ದ್ರಾವಿಡ ಆಂದೋಲನವಾಗಿ, ಹಿಂದಿಯ ವಿರುದ್ಧ ತಮಿಳು ಆಂದೋಲನವಾಗಿ, ವೈದಿಕ ಧರ್ಮ ಮತ್ತು ಜಾತಿಪದ್ಧತಿಗಳ ವಿರುದ್ಧ ಬ್ರಾಹ್ಮಣ ವಿರೋಧಿ ಆಂದೋಲನವಾಗಿ, ಕೊನೆಗೆ ಅಖಂಡ ಭಾರತದ ವಿರುದ್ಧ ಸ್ವಾಯತ್ತ ತಮಿಳುನಾಡಿನ ಆಂದೋಲನದ ವಿಸ್ತೃತ ಹಾಗೂ ವ್ಯಾಪಕ ಸ್ವರೂಪ ಪಡೆಯಿತು.
ಆದರೆ ಕನ್ನಡ ಚಳುವಳಿ ಹಾಗಾಗಲು ಇದ್ದ ಬಹು ಮುಖ್ಯ ತೊಡಕು ಎಂದರೆ ಅದರ ಚುಕ್ಕಾಣಿ(ಮೆದುಳು)ಹಿಡಿದಿದ್ದವರು ಬ್ರಾಹ್ಮಣರು. ಈಗಲೂ ಕನ್ನಡ ನೆಲದ ಕೆಲವು ಚಳುವಳಿಗಳ ಮೆದುಳುಗಳು ಬ್ರಾಹ್ಮಣರು.


ದೂರದ ಯುರೋಪಿನವರ ಮಾತುಗಳನ್ನು ಆಲೋಚಿಸುವ ನಾವು ನಮ್ಮವರೆ ಆದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಮಾತುಗಳನ್ನು ಆಲೋಚಿಸಲು ಹಿಂದೇಟು ಹಾಕಬಾರದಲ್ಲವೆ?
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ನಲ್ವಾರೈಕೆಗಳು.

Join Whatsapp