ಕರ್ನಾಟಕ ವಿದ್ಯುತ್ ನಿಗಮದಲ್ಲಿ 2975 ಹುದ್ದೆಗಳಿಗೆ ನೇಮಕಾತಿ: ಇಂದೇ ಅಪ್ಲೈ ಮಾಡಿ

Prasthutha|

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಸ್ಥೆಯು 2975 ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

- Advertisement -

KPTCL ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯ ಮೂಲಕ 2024 ಅಕ್ಟೋಬರ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.

ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

- Advertisement -

ವಿದ್ಯಾರ್ಹತೆ 10ನೇ, 12ನೇ ತರಗತಿ ಪಾಸಾಗಿರಬೇಕು. ಡಿಪ್ಲೋಮಾ, ಬಿ.ಇ ಅಥವಾ ಬಿ.ಟೆಕ್ ತೇರ್ಗಡೆಯಾಗಿರಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ನವೆಂಬರ್-2024

ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 21-ಅಕ್ಟೋಬರ್-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20-ನವೆಂಬರ್-2024

ವಯೋಮಿತಿ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ 2024 ನವೆಂಬರ್ 20ರಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು.

KPTCL ವಯೋಮಾನ ಸಡಿಲಿಕೆ: ಎಸ್‌ಸಿ/ಎಸ್‌ಟಿ/ಕ್ಯಾಟ್-I ಅಭ್ಯರ್ಥಿಗಳು: 05 ವರ್ಷ ಸಡಿಲಿಕೆ. ಪ್ರವರ್ಗ -2ಎ/2ಬಿ/3ಎ & 3ಬಿ ಅಭ್ಯರ್ಥಿಗಳು: 03 ವರ್ಷ ಸಡಿಲಿಕೆ

ವೇತನ ಶ್ರೇಣಿ 1ನೇ ವರ್ಷ: ರೂ. 17,000/- 2ನೇ ವರ್ಷ: ರೂ. 19,000/- 3ನೇ ವರ್ಷ: ರೂ. 21,000/-

ಅರ್ಜಿ ಶುಲ್ಕ: ಅಂಗವಿಕಲ ಅಭ್ಯರ್ಥಿಗಳು: ಶೂನ್ಯ ಶುಲ್ಕ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: ರೂ. 378 ಶುಲ್ಕ ಸಾಮಾನ್ಯ/ಪ್ರವರ್ಗ -2ಎ/2ಬಿ/3ಎ & 3ಬಿ ಅಭ್ಯರ್ಥಿಗಳು: ರೂ. 614 ಶುಲ್ಕ ಕಟ್ಟಬೇಕು



Join Whatsapp