ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟಗೊಂಡಿದ್ದು, 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯ 2019, 2020, 2021 ಹಾಗೂ 2020ನೇ ಸಾಲಿನ ವಿಶೇಷ ಪ್ರಶಸ್ತಿ, ಜೀವಮಾನ ಸಾಧನೆ ಹಾಗೂ ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ರಾಜ್ಯದ ವಿವಿಧ ಪತ್ರಕರ್ತರನ್ನು ಆಯ್ಕೆ ಮಾಡಿ ಪಟ್ಟಿಯನ್ನು ಪ್ರಕಟಿಸಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ.ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಪರಿಗಣಿಸಿ ನಾಡಿನ ವಿವಿಧ ಪತ್ರಕರ್ತರನ್ನು “ಮಾಧ್ಯಮ ವಾರ್ಷಿಕ ಪ್ರಶಸ್ತಿ” ಮತ್ತು “ದತ್ತಿ ಪ್ರಶಸ್ತಿ”ಗಳಿಗೆ ಆಯ್ಕೆ ಮಾಡಲಾಗಿದೆ.
ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ರೂ.50 ಸಾವಿರ ರೂ., ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.
ಈ ಬಾರಿ ಒಟ್ಟು 21 ಮಂದಿ ಪತ್ರಕರ್ತರನ್ನು “ದತ್ತಿ ಪ್ರಶಸ್ತಿ” ಗೆ ಆಯ್ಕೆ ಮಾಡಲಾಗಿದೆ.
ನಾಲ್ಕು ವರ್ಷಗಳ ದತ್ತಿ ಪ್ರಶಸ್ತಿಗಳು: ಆಂದೋಲನ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ “ಆಂದೋಲನ ಪ್ರಶಸ್ತಿ”, ಅಭಿಮಾನಿ ಸಂಸ್ಥೆ ಸ್ಥಾಪನೆ ಮಾಡಿರುವ “ಅಭಿಮಾನಿ” ಮತ್ತು “ಅರಗಿಣಿ” ಪ್ರಶಸ್ತಿಗಳು, ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ “ಮೈಸೂರು ದಿಗಂತ” ಪ್ರಶಸ್ತಿ ಹಾಗೂ ಪತ್ರಕರ್ತ ಕೆ.ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ “ಮೂಕನಾಯಕ ಪ್ರಶಸ್ತಿ”ಗೂ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಮೊತ್ತ ತಲಾ 10 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ ಎಂದು ಸದಾಶಿವ ಶೆಣೈ ಕೆ. ಹೇಳಿದ್ದಾರೆ.
ಮೂಕ ನಾಯಕ ಪ್ರಶಸ್ತಿ: 2019ನೆ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ದಲಿತ ವಾಯ್ಸ್ ಸಂಪಾದಕ ವಿ.ಟಿ.ರಾಜಶೇಖರ್, (2020ನೆ) ಮೈಸೂರು ವಿವಿಯ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ, ದೀನಬಂಧು ಸ್ವಯಂ ಸೇವಾ ಸಂಸ್ಥೆ ಮುಖ್ಯಸ್ಥ ಪ್ರೊ.ಜಿ.ಎಸ್.ಜಯದೇವ್(2021), ಮೈಸೂರು ವಿವಿಯ ಪ್ರಾಧ್ಯಾಪಕ ಪ್ರೊ.ಮುಝಫರ್ ಅಸ್ಸಾದಿ(2022).
ಆಂದೋಲನ ಪ್ರಶಸ್ತಿ: ನೃಪತುಂಗ ದಿನಪತ್ರಿಕೆ ಕಲಬುರ್ಗಿ(2019), ನಾವಿಕ ದಿನಪತ್ರಿಕೆ ಶಿವಮೊಗ್ಗ(2020), ಸಂಜೆದರ್ಪಣ ಹುಬ್ಬಳ್ಳಿ(2021), ಜಯಕಿರಣ ದಿನಪತ್ರಿಕೆ ಮಂಗಳೂರು(2022)
ಅರಗಿಣಿ ಪ್ರಶಸ್ತಿ: ಗಿರೀಶ್ ರಾವ್(2019), ಗಣೇಶ್ ಕಾಸರಗೊಡು(2020), ರಘುನಾಥ್ ಚ.ಹ.(2021), ಡಾ.ಶರಣು ಹುಲ್ಲೂರು(2022) ಪುರಸ್ಕೃತರಾಗಿದ್ದಾರೆ.