ಪ್ರಧಾನಿ ಮೋದಿ ಬಂದರೆ ಮಾತ್ರ ರಸ್ತೆ ದುರಸ್ತಿ ಮಾಡುವುದಾ?: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ತರಾಟೆ

Prasthutha|

ಬೆಂಗಳೂರು: ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡದೆ ಆಗಾಗ ಪ್ರಧಾನಮಂತ್ರಿ ಬಂದರೆ ಮಾತ್ರ ರಸ್ತೆಗಳನ್ನು ದುರಸ್ತಿ ಮಾಡುವುದಾ? ಎಂದು ಪ್ರಶ್ನಿಸಿದ ಕರ್ನಾಟಕ ಹೈಕೋರ್ಟ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

- Advertisement -

ನಗರಕ್ಕೆ ಆಗಾಗ ಪ್ರಧಾನಮಂತ್ರಿ, ರಾಷ್ಟ್ರಪತಿ ಬಂದರೆ ರಸ್ತೆಗಳು ಸರಿಯಾಗಬಹುದು. ಜೂನ್ 20 ರಂದು ಪ್ರಧಾನಿ ಮೋದಿ ಕರ್ನಾಟಕ ಭೇಟಿಯ ಸಂದರ್ಭದಲ್ಲಿ 23 ಖರ್ಚು ಮಾಡಿ ರಸ್ತೆ ಗುಂಡಿಗಳನ್ನು ಮುಚ್ಚಿದ್ದೀರಾ. ಪ್ರತಿ ಸಲವು ಬೇರೆ ಬೇರೆ ಮಾರ್ಗವಾಗಿ ಪಧಾನಿ ಉತ್ತಮ. ಅವರ ಸಂತೃಪ್ತಿಗಾದರೂ ರಸ್ತೆಗಳನ್ನು ದುರಸ್ಥಿಗೊಳಿಸಬಹುದು ಎಂದು ನ್ಯಾಯಮೂರ್ತಿಗಳಾದ ಬಿ. ವೀರಪ್ಪ, ಕೆ.ಎಸ್. ಹೇಮಲೇಖಾ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗಾಗಿ ಬಿಡಿಎ ಸುಮಾರು 23 ಕೋಟಿ ರೂ. ಖರ್ಚು ಮಾಡಿದ್ದು, ಕಳಪೆ ಕಾಮಗಾರಿಯಿಂದಾಗಿ ರಸ್ತೆ ಕೇವಲ ಮೂರು ದಿನಕ್ಕೆ ಕಿತ್ತುಹೋಗಿವೆ.

Join Whatsapp