ಕುಂಬಾರ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರದಿಂದ ಆದೇಶ

Prasthutha|

ಬೆಂಗಳೂರು: ಕಂಬಾರ ಸಮುದಾಯದ ಹಿತದೃಷ್ಟಿಯಿಂದ ಕಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

- Advertisement -

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 2ಎನ ಕ್ರಮ ಸಂಖ್ಯೆ 6ಎಯಿಂದ (ಕ್ಯೂ)ವರೆಗೆ ಕ್ರಮವಾಗಿ ಕುಂಬಾರ, ಚಕ್ರಸಾಲಿ, ಗುಣಗ, ಗಣಗಿ, ಕೊಯವ, ಕುಲ, ಕುಲಾಲ, ಕುಂಬಾರ್, ಕುಂಬಾಡ್ಡ್, ಕುಮ್ಮಾರ, ಕಸವನ್, ಮೂಲ್ಯ, ಸಜ್ಜನ, ಖುಮಾರ, ಕುಂಭಾರ, ಖಂಭಾರ, ಕುಲಾಲರ್ ಜಾತಿಗಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ. ಮಾತ್ರವಲ್ಲದೆ, ಈ ಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕುಂಬಾರ ಸಮುದಾಯದ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಷಾಹೀನ್ ಪರ್ವೀನ್ ಕೆ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕುಂಬಾರ ಸಮುದಾಯ ಸುಮಾರು 28 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಹಾಗೂ ಶೋಷಿತ ಸಮುದಾಯವಾಗಿದೆ. ಕುಂಬಾರ ವೃತ್ತಿಯನ್ನೇ ನಂಬಿಕೊಂಡಿರುವ ಈ ಸಮುದಾಯವು ಹೊಟ್ಟೆಪಾಡಿಗಾಗಿ ಊರು ಬಿಡುತ್ತಿದ್ದಾರೆ. ಇದರು ಈ ಸಮುದಾಯದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಗಳು ಕೇಳಿಬಂದಿದ್ದವು.

- Advertisement -

2023-24ನೇ ಸಾಲಿನ ಅಧಿವೇಶನದಲ್ಲಿ ಕುಂಬಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ನೀಡುವ ಬಗ್ಗೆ ರಾಜ್ಯ ಸರ್ಕಾರವು ಭರವಸೆ ನೀಡಿತ್ತು. ಆದರೆ ಅಭಿವೃದ್ಧಿ ನಿಮಗ ಸ್ಥಾಪಿಸಲು ಮೀನಾಮೇಶ ಎಣಿಸಿದ ಹಿನ್ನಲೆ ರಾಜ್ಯ ಕುಂಬಾರರ ಯುವ ಸೈನ್ಯ ಅಸಮಾಧಾನ ಹೊರಹಾಕಿತ್ತು. ನಿಮಗ ಸ್ಥಾಪಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಬೆಂಗಳೂರಿನ ಪ್ರೀಡಂ ಪಾರ್ಕ್​ನಲ್ಲಿ 18 ದಿನಗಳ ಕಾಲ ಅನಿರ್ದಿಷ್ಟ ಧರಣಿ ನಡೆಸಲಾಗಿತ್ತು.

Join Whatsapp