ಬೆಂಗಳೂರು: ಕರ್ನಾಟಕ ಸರ್ಕಾರವು ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರವಾಗಿದೆ. ಬಿಜೆಪಿಯವರು ಪ್ರತಿಯೊಂದು ವಹಿವಾಟಿಗೆ 40 ಶೇಕಡಾ ಕಮಿಷನ್ ತೆಗೆದುಕೊಳ್ಳುತ್ತಾರೆ. ಹದಿಮೂರು ಸಾವಿರ ಖಾಸಗಿ ಶಾಲೆಗಳು ರಾಜ್ಯ ಸರಕಾರಕ್ಕೆ ಶೇ.40ರಷ್ಟು ಕಮಿಶನ್ ನೀಡಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಮಾತನಾಡಿ, ಇದು ನನ್ನ ಮಾತಲ್ಲ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವುದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಸ್ವತಃ ಬಿಜೆಪಿ ಶಾಸಕರು ಹೇಳುತ್ತಿದ್ದಾರೆ. ಸಿಎಂ ಹುದ್ದೆಯನ್ನು 2,500 ಕೋಟಿ ರೂ.ಗೆ ಖರೀದಿಸಬಹುದು ಎಂದು ಸ್ವತಃ ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ. ಕರ್ನಾಟಕದಲ್ಲಿ ಉದ್ಯೋಗಗಳು ಮಾರಾಟಕ್ಕಿವೆ… ಪೊಲೀಸ್, ಸಬ್ ಇನ್ಸ್ ಪೆಕ್ಟರ್ ಹುದ್ದೆಗಳು 80 ಲಕ್ಷಕ್ಕೆ ಮಾರಾಟವಾಗಿವೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಮಾರಾಟ ಮಾಡಲಾಗುತ್ತದೆ. ಅವರು ಮಾರಾಟ ಮಾಡಬಹುದಾದ ಎಲ್ಲವನ್ನೂ ಅವರು ಮಾರಾಟ ಮಾಡುತ್ತಾರೆ” ಎಂದು ರಾಹುಲ್ ಕಿಡಿಕಾರಿದರು
ಕಳೆದ ತಿಂಗಳು ಪ್ರಾರಂಭಿಸಲಾದ ಭಾರತ್ ಜೋಡೋ ಯಾತ್ರೆಯು ದ್ವೇಷ, ಕೋಪ, ನಿರುದ್ಯೋಗ, ಹಣದುಬ್ಬರ, ಸರಕುಗಳ ಬೆಲೆಗಳಲ್ಲಿನ ನಾಟಕೀಯ ಏರಿಕೆಯ ವಿರುದ್ಧ ಹೋರಾಡಲು ಎಂದು ಒತ್ತಿಹೇಳಿದರು.