ಮುಸ್ಲಿಮೇತರರು ‘ಹಲಾಲ್’ ಮಾಂಸ ತಿನ್ನುವಂತೆ ಮಾಡುವುದು ಧರ್ಮಭ್ರಷ್ಟಕ್ಕೆ ಒಳಪಡಿಸುವುದಕ್ಕೆ ಸಮಾನ: ರಹೀಮ್ ಉಚ್ಚಿಲ

Prasthutha|

ಮಂಗಳೂರು: ಮುಸ್ಲಿಮೇತರರನ್ನು ‘ಹಲಾಲ್ ಮಾಂಸ’ ತಿನ್ನುವಂತೆ ಮಾಡುವುದು ‘ಧರ್ಮ ಭ್ರಷ್ಟ’ಕ್ಕೆ ಒಳಪಡಿಸುವುದಕ್ಕೆ ಸಮಾನವಾಗಿದೆ. “ಹಲಾಲ್ ಎಂಬ ಸತ್ಯವನ್ನು ಮರೆಮಾಚಿ ಮುಸ್ಲಿಮೇತರರು ‘ಹಲಾಲ್’ ಮಾಂಸ ತಿನ್ನುವಂತೆ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಮುಖಂಡ ರಹೀಮ್ ಉಚ್ಚಿಲ ತಿಳಿಸಿದ್ದಾರೆ.

- Advertisement -

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಹೀಮ್ ಉಚ್ಚಿಲ, ಹಲಾಲ್ ಎಂಬುದು ಮುಸ್ಲಿಮರಿಗೆ ಮಾತ್ರ ಅನ್ವಯವಾಗುವ ವಿಚಾರವಾಗಿದೆ. ಮುಸ್ಲಿಮರೇತರನ್ನು ಹಲಾಲ್ ಮಾಂಸ್ ತಿನ್ನುವಂತೆ ಮಾಡುವುದು ಅವರನ್ನು ಧರ್ಮಭ್ರಷ್ಟಕ್ಕೆ ಒಳಪಡಿಸುವುದಕ್ಕೆ ಸಮಾನವಾಗಿದೆ ಎಂದು ಅವರು ಹೇಳಿದರು.

‘ಹಲಾಲ್’ ಎಂಬುದು ಇಸ್ಲಾಮ್ ಧರ್ಮದ ಅವಿಭಾಜ್ಯ ಅಂಗವಾಗಿದ್ದು, ಇದು ಕಳೆದ 1400 ವರ್ಷಗಳಿಂದ ಆಚರಣೆಯಲ್ಲಿದೆ. ಪ್ರಪಂಚದಾದ್ಯಂತ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ಬಳಿಕ ಹಲಾಲ್ ಪದ್ಧತಿಯ ಪ್ರಕಾರ ಕತ್ತರಿಸಿದ ಮಾಂಸವನ್ನು ಸೇವನೆ ಮಾಡುತ್ತಾರೆ. ಈ ಅಭ್ಯಾಸ ಮುಸ್ಲಿಮರೇತರಿಗೆ ಅನ್ವಯಿಸುವುದಿಲ್ಲ ಎಂದು ರಹೀಮ್ ಉಚ್ಚಿಲ ತಿಳಿಸಿದ್ದಾರೆ.

- Advertisement -

ಮುಸ್ಲಿಮೇತರರು ಹಲಾಲ್ ಮಾಂಸವನ್ನು ಒಪ್ಪದಿದ್ದರೆ ಅವರು ಸ್ವಯಂಪ್ರೇರಣೆಯಿಂದ ಮುಸ್ಲಿಮೇತರರ ಮಾಲಕತ್ವದ ಅಂಗಡಿಗಳಿಂದ ಮಾಂಸವನ್ನು ಖರೀದಿಸಿ ಸೇವಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಹಲಾಲ್ ವಿಚಾರವನ್ನು ರಾಜಕೀಯ ಲಾಭಕ್ಕೆ ಯಾರೂ ಬಳಸಿಕೊಳ್ಳಬಾರದು. ಎರಡು ಧರ್ಮಗಳ ಮುಖಂಡರು ಹಲಾಲ್ ಸಮಸ್ಯೆಯ ಕುರಿತು ಚರ್ಚಿಸಿ ಸೌಹಾರ್ದಯುತವಾಗಿ ಪರಿಹಾರವನ್ನು ಕಂಡುಕೊಳ್ಳಬಹುದು. ಇದಲ್ಲದೆ ಮುಸ್ಲಿಮೇತರರಿಗೆ ಹಲಾಲ್’ಗೆ ಸಂಬಂಧಿಸಿದ ಆಚರಣೆ, ಪ್ರಾರ್ಥನೆಯ ಸಮಯದಲ್ಲಿ ಬಳಸುವ ಪದವಾದ ಹಲಾಲ್ ಮತ್ತು ಅದರ ಅರ್ಥವನ್ನು ಮುಸ್ಲಿಮೇತರರಿಗೆ ತಿಳಿಸುವುದು ಮುಸ್ಲಿಮರ ಕರ್ತವ್ಯವಾಗಿದೆ. ‘ಹಲಾಲ್’ ಎಂಬ ಸತ್ಯವನ್ನು ಮುಚ್ಚಿಟ್ಟು ವ್ಯವಹಾರ ನಡೆಸುವುದು ಸರಿಯಲ್ಲ,” ಎಂದು ಅವರು ಹೇಳಿದರು.

ಹಿಂದೂ ದೇವಾಲಯಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳ ಮೇಲಿನ ನಿಷೇಧದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೂ ಮತ್ತು ಮುಸ್ಲಿಮರ ನಡುವೆ ಅಂತಹ ನಿರ್ಬಂಧವನ್ನು ಶಾಂತಿಯುತವಾಗಿ ಬಗೆಹರಿಸಬೇಕೆಂದು ಅವರು ತಿಳಿಸಿದ್ದಾರೆ.




Join Whatsapp