ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಕರೀನಾ ಕಪೂರ್ ವಿರುದ್ಧ ಎಫ್ ಐ ಆರ್ !

Prasthutha|

ಮುಂಬೈ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ತಮ್ಮ ಗರ್ಭಾವಸ್ಥೆಯಲ್ಲಿನ ದೈಹಿಕ ಮತ್ತು ಮಾನಸಿಕ ತೊಳಲಾಟಗಳ ಕುರಿತಾಗಿ ನಟಿ ಕರೀನಾ ಕಪೂರ್ ಪುಸ್ತಕ ಬರೆದಿದ್ದು, ಅದಕ್ಕೆ ‘ಪ್ರಗ್ನೆನ್ಸಿ ಬೈಬಲ್’ ಎಂದು ಹೆಸರಿಟ್ಟಿದ್ದರು.

- Advertisement -

‘ಪ್ರಗ್ನೆನ್ಸಿ ಬೈಬಲ್’ ಪುಸ್ತಕ ಕುರಿತು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ಮಾತನಾಡಿದ್ದರು. ಆದರೆ ಇದೀಗ ಇದೇ ವಿಚಾರದ ಕುರಿತಾಗಿ ಕ್ರಿಶ್ಚಿಯನ್ ಸಮುದಾಯ ಮಹಾರಾಷ್ಟ್ರದಲ್ಲಿ ದೂರು ನೀಡಿದೆ.
‘ಪ್ರಗ್ನೆನ್ಸಿ ಬೈಬಲ್’ ಬುಕ್ ಬರೆದ ಕರೀನಾ ಕಪೂರ್, ಅದಿತಿ ಶಾ ಭೀಮ್ ಜಾನಿ ಹಾಗೂ ಪುಸ್ತಕವನ್ನು ಪಬ್ಲಿಶ್ ಮಾಡಿದ ಜಗ್ಗರ್ ನಾಟ್ ಬುಕ್ಸ್ ವಿರುದ್ಧ ಮುಂಬೈಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಆಲ್ಫಾ ಒಮೇಗಾ ಕ್ರಿಶ್ಚಿಯನ್ ಮಹಾಸಂಘದ ಅಧ್ಯಕ್ಷ ಆಶೀಶ್ ಶಿಂಧೆ ದೂರು ನೀಡಿದ್ದಾರೆ.

ಶೀರ್ಷಿಕೆಯಲ್ಲಿ ಪವಿತ್ರವಾದ ‘ಬೈಬಲ್’ ಹೆಸರನ್ನು ಬಳಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ಇದರಿಂದ ಕ್ರಿಶ್ಚಿಯನ್ ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಆಶೀಶ್ ಶಿಂಧೆ ಹೇಳಿದ್ದಾರೆ. ಆದರೆ, ಈ ಬಗ್ಗೆ ಕರೀನಾ ಕಪೂರ್ ಹಾಗೂ ಪ್ರಕಾಶಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Join Whatsapp