ಕೊಡಗು | ಗ್ಯಾಸ್ ಸಾಗಾಣಿಕೆಗೆ ದುಪ್ಪಟ್ಟು ಪಡೆದಿರುವ ಏಜೆನ್ಸಿ: ಕ್ರಮ ತೆಗೆದುಕೊಳ್ಳುವಂತೆ ಕರವೇ ಮನವಿ

Prasthutha|

ಮಡಿಕೇರಿ: ಗ್ಯಾಸ್  ಏಜೆನ್ಸಿಯವರ  ದುಬಾರಿ ಸಾಗಾಣಿಕೆ ವೆಚ್ಚವನ್ನು ಕಡಿವಾಣ ಹಾಕಬೇಕೆಂದು ಹಾಗೂ ಕ್ರಮಕೈಗೊಳ್ಳುವಂತೆ ಕರವೇ ವತಿಯಿಂದ ಮನವಿ ಸಲ್ಲಿಸಲಾಯಿತು.

- Advertisement -

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿ ನಲ್ಲಿರುವ ಶ್ರೀ ಗಜಾನನ ಗ್ಯಾಸ್ ಹಾಗೂ ಶನಿವಾರಸಂತೆ ಹೋಬಳಿ ಭಾರತ್ ಗ್ಯಾಸ್  ಏಜೆನ್ಸಿಯವರು ಊರು ಊರುಗಳಿಗೆ ಅವರ ವಾಹನಗಳಲ್ಲಿ ಗ್ಯಾಸ್ ಡೆಲಿವರಿ ಮಾಡುತ್ತಿದ್ದು, ಈ ವ್ಯವಸ್ಥೆಗೆ ದುಬಾರಿ ವೆಚ್ಚ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ಆದೇಶದಂತೆ 5 ಕಿಲೋ ಮೀಟರ್ ವರೆಗೆ ಉಚಿತವಾಗಿ ಮನೆ ಮನೆಗೆ ಗ್ಯಾಸ್ ವಿತರಣೆ ಮಾಡಬೇಕು. 5ಕಿಲೋಮೀಟರ ನಂತರ  1 ಕಿಲೋಮೀಟರ್ ಗೆ 1.70ರಂತೆ ತೆಗೆದುಕೊಳ್ಳಬೇಕೆಂಬ ಆದೇಶವಿದ್ದರೂ ಇದನ್ನು ಗಾಳಿಗೆ ತೂರಿ ಗ್ಯಾಸ್ ಏಜೆನ್ಸಿ ಜನರಿಂದ ದುಪ್ಪಟ್ಟು ಹಣ ಕೀಳುತ್ತಿದ್ದಾರೆ.

ಶ್ರೀ ಗಜಾನನ ಗ್ಯಾಸ್ ಏಜೆನ್ಸಿ 10 ಕಿಲೋ ಮೀಟರ್ ಗಳಿಗೆ  ಸಾಗಾಣಿಕೆ ವೆಚ್ಚ 70 ರೂ ವನ್ನು  ತೆಗೆದುಕೊಳ್ಳುತ್ತಿದ್ದಾರೆ. ಹಾಗೂ ಶನಿವಾರಸಂತೆಯ ಭಾರತ್ ಗ್ಯಾಸ್ 10 ಕಿಲೋಮೀಟರ್ ಗೆ ಸಾಗಾಣಿಕೆ ವೆಚ್ಚವನ್ನು 80  ರೂ ಗಳನ್ನು ಪಡೆಯುತ್ತಿದ್ದಾರೆ. 2ಗ್ಯಾಸ್ ಏಜೆನ್ಸಿಯವರು   ಸೋಮವಾರಪೇಟೆ ಮತ್ತು ಶನಿವಾರಸಂತೆಯಲ್ಲಿ ದುಪ್ಪಟ್ಟು ಹಣ  ಪಡೆಯುತ್ತಿದ್ದರೆಂದು ಸಾರ್ವಜನಿಕರು ಆರೋಪಿಸಿ ಕರವೇ ಕಾರ್ಯಕರ್ತರಿಗೆ ಮಾಹಿತಿ  ನೀಡುತ್ತಾರೆ.

- Advertisement -

 ಇದರ ಅನ್ವಯ  ಗ್ಯಾಸ್ ಏಜೆನ್ಸಿಯವರ  ದುಬಾರಿ ಸಾಗಾಣಿಕೆ ವೆಚ್ಚವನ್ನು ಕಡಿವಾಣ ಹಾಕಬೇಕೆಂದು ಸೋಮವಾರಪೇಟೆ ತಾಲ್ಲೂಕು ಆಹಾರ ನಿರೀಕ್ಷಕರಿಗೆ ಶಿವರಾಮೇಗೌಡರ ಕರವೇ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಈ ಮನವಿಯನ್ನು ಸೋಮವಾರಪೇಟೆ ತಾಲ್ಲೂಕು ತಹಸೀಲ್ದಾರ್ ಕಚೇರಿಯಲ್ಲಿರುವ ಶಿರಸ್ತೇದಾರರು ಆಗಿರುವ ಚಂದ್ರಹಾಸ ಅವರಿಗೆ ಮನವಿ ಸಲ್ಲಿಸಲಾಯಿತು. ಆಹಾರ ನಿರೀಕ್ಷಕರು ಒಂದು ವೇಳೆ ಕ್ರಮ ಕೈಗೊಳ್ಳದೆ ಹೋದರೆ ಕರವೇ ಕಾರ್ಯಕರ್ತರಿಂದ  ಸೋಮವಾರಪೇಟೆ  ತಾಲ್ಲೂಕಿನಲ್ಲಿರುವ ಆಹಾರ ನಿರೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಹಾಗೂ ಗ್ಯಾಸ್ ಅಂಗಡಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಎಚ್ಚರಿಕೆ ನೀಡಿದರು.

Join Whatsapp