January 13, 2021

ಮಂಗಳೂರು : ಲಾಡ್ಜ್ ಗೆ ದಾಳಿ; ವೇಶ್ಯಾವಾಟಿಕೆಗೆ ತಳ್ಳಲಾಗಿದ್ದ ನಾಲ್ವರು ಮಹಿಳೆಯರ ರಕ್ಷಣೆ

ಮಂಗಳೂರು : ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಹಿಂದುಸ್ತಾನ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ವೇಶ್ಯಾವಾಟಿಕೆಗೆ ಮಹಿಳೆಯರನ್ನು ಕರೆತಂದಿದ್ದ ಆರೋಪಿ ಸುನಿಲ್ ಎಂಬಾತ ಪರಾರಿಯಾಗಿದ್ದಾನೆ. ಲಾಡ್ಜ್ ಮಾಲಿಕ ಮೋಹನ್, ಮ್ಯಾನೇಜರ್ ಅಬ್ದುಲ್ ರಶೀದ್, ರೂಂ ಬಾಯ್ ಉದಯ ಶೆಟ್ಟಿ, ಗಿರಾಕಿಗಳಾದ ಭರತ್ ಮತ್ತು ಬಾಲಕೃಷ್ಣ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್ ಪೆಕ್ಟರ್ ಗಳಾದ ಗೋವಿಂದರಾಜು, ಶ್ರೀಮತಿ ರೇವತಿ, ಪಿಎಸ್ ಐ ನಾಗರಾಜ್, ಜಗದೀಶ್, ಸಿಬ್ಬಂದಿ ಸುಜನ್ ಶೆಟ್ಟಿ, ಮಹೇಶ್, ತಿಪ್ಪ ರೆಡ್ಡಪ್ಪ, ಮಾದೇವ್, ಸಾಗರ್ ರತ್ನಾಕರ, ಅರುಣಾ, ಪುಷ್ಪಾ ರಾಣಿ, ಗುರುನಾಥ ದಾಳಿಯಲ್ಲಿ ಭಾಗವಹಿಸಿದ್ದರು.

ಟಾಪ್ ಸುದ್ದಿಗಳು

ವಿಶೇಷ ವರದಿ