ಕಾಂಗ್ರೆಸ್ ನಾಯಕತ್ವವನ್ನು ವಿಮರ್ಶಿಸಿದ ಕಪಿಲ್ ಸಿಬಲ್: ಪಕ್ಷ ಆತ್ಮವಲೋಕನ ಮಾಡುವ ಕಾಲ ಕಳೆದಿದೆ ಎಂದ ನಾಯಕ

Prasthutha|

ಹೊಸದಿಲ್ಲಿ: ಬಿಹಾರ ಚುನಾವಣೆಯಲ್ಲಿ ಅತ್ಯಂತ ದುರ್ಬಲವಾಗಿ ಹೊರಹೊಮ್ಮಿದ ಕಾಂಗ್ರೆಸ್ ಪಕ್ಷದ ಕುರಿತು ಪಕ್ಷದ ಪ್ರಮುಖ ನಾಯಕರೊಬ್ಬರೊ ಸಾರ್ವಜನಿಕವಾಗಿ ವಿಮರ್ಶಿಸಿದ್ದಾರೆ. ಸಂಘಟನೆಯನ್ನು ಪುನರುಜ್ಜೀವನಗೊಳಿಸಲು “ಅನುಭವಿ ಮನಸ್ಸು, ಅನುಭವಿ ಕೈಗಳು ಮತ್ತು ರಾಜಕೀಯವನ್ನು ಅರ್ಥೈಸಬಲ್ಲ ನಾಯಕರ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ. ‘ಆತ್ಮಾವಲೋಕನದ ಸಮಯ ಕಳೆದಿದೆ’ ಎಂದು ನಾಯಕತ್ವದ ಕುರಿತ ತನ್ನ ವಿಮರ್ಶೆಯಲ್ಲಿ ಹೇಳಿದ್ದಾರೆ.

ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಕಪಿಲ್ ಸಿಬಲ್, “ನಾವು ಹಲವು ಹಂತಗಳಲ್ಲಿ ಸಂಘಟನಾತ್ಮಕವಾಗಿ ಹಲವು ವಿಷಯಗಳನ್ನು ಕೈಗೊಳ್ಳುವ ಅಗತ್ಯವಿದೆ – ಯಾವುದೇ ರೂಪದಲ್ಲಿ ಮಾಧ್ಯಮಗಳಲ್ಲಿ ಅಭಿವ್ಯಕ್ತಿಗೊಳಿಸುವುದು, ಜನರು ಆಲಿಸಲು ಬಯಸುವ ಜನರನ್ನು ಸಿದ್ಧಪಡಿಸುವುದು, ವಿವೇಕಯುತವಾಗಿ ವಿಚಾರವನ್ನು ವ್ಯಕ್ತಪಡಿಸಬಲ್ಲ ಚಿಂತನಾಶೀಲ ಮತ್ತು ಕ್ರಿಯಾಶೀಲ ನಾಯಕತ್ವವನ್ನು ಒದಗಿಸುವುದು ಮುಂತಾದುವು” ಎಂದು ಹೇಳಿದ್ದಾರೆ. ‘ನಾವು ಇಳಿಮುಖವಾಗಿದ್ದೇವೆ’ ಎಂಬುದನ್ನು ಕಾಂಗ್ರೆಸ್ಸಿಗರು ಅರ್ಥೈಸಬೇಕೆಂದು ಅವರು ಹೇಳಿದ್ದಾರೆ.

- Advertisement -

ಬಿಹಾರ ಚುನಾವಣೆ, ಗುಜರಾತ್ ಹಾಗೂ ಮಧ್ಯಪ್ರದೇಶವೊಳಗೊಂಡಂತೆ ದೇಶಾದ್ಯಂತ ನಡೆದ ಹಲವು ಉಪಚುನಾವಣೆಗಳನ್ನು ಉಲ್ಲೇಖಿಸುತ್ತಾ, “ನಾವು ಎಲ್ಲಿ ಪರ್ಯಾಯವಾಗಿದ್ದೆವೋ, ಅಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ನೊಂದಿಗೆ ನಿರೀಕ್ಷಿತ ರೀತಿಯಲ್ಲಿ ಆತ್ಮವಿಶ್ವಾಸವನ್ನು ಮರುಸ್ಥಾಪಿಸಲಿಲ್ಲ. ಹಾಗಾಗಿ ಆತ್ಮಾವಲೋಕನದ ಸಮಯ ಕಳೆದು ಹೋಗಿದೆ. ನಾವು ಉತ್ತರಗಳನ್ನು ತಿಳಿದಿದ್ದೇವೆ. ಅವುಗಳನ್ನು ಗುರುತಿಸಲು ಕಾಂಗ್ರೆಸ್ ಧೈರ್ಯ ಮತ್ತು ಇಚ್ಛಾ ಶಕ್ತಿಯನ್ನು ತೋರಿಸಬೇಕಾಗಿದೆ” ಎಂದು ಕಪಿಲ್ ಸಿಬಲ್ ಹೇಳಿದರು.

- Advertisement -