ಕಾನ್ಪುರ ಟೆಸ್ಟ್: ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 258/4 ; ಶ್ರೇಯಸ್ ಅಯ್ಯರ್ ರವೀಂದ್ರ ಜಡೇಜಾ ಶತಕದ ಜೊತೆಯಾಟ

Prasthutha|

ಕಾನ್ಪುರ: ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಶ್ರೇಯಸ್ ಅಯ್ಯರ್, ಆರಂಭಿಕ ಆಟಗಾರ ಶುಭ್ಮನ್ ಗಿಲ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಗಳಿಸಿದ ಅರ್ಧಶತಕದ ಶತಕಗಳ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟದಲ್ಲಿ 258 ರನ್’ಗಳಿಸಿದೆ.

- Advertisement -

ಕಾನ್ಪುರದ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್’ಗೆ ಇಳಿದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿರಲಿಲ್ಲ. ಶುಭಮನ್ ಗಿಲ್ ಜೊತೆ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರವಾಲ್ ಕೇವಲ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಚೇತೇಶ್ವರ ಪೂಜಾರ, ಗಿಲ್ ಜೊತೆಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು.

52 ರನ್’ಗಳಿಸಿ ಶುಭಮನ್ ಗಿಲ್ ಹಾಗೂ ಪೂಜಾರ 26 ರನ್’ಗಳಿಸಿ ನಿರ್ಗಮಿಸಿದರು. ನಾಯಕ ಅಜಿಂಕ್ಯ ರಹಾನೆ ಕೊಡುಗೆ 35 ರನ್‌. ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಶತಕದ ಜೊತೆಯಾಟ ಆಡುವ ಮೂಲಕ ಕಿವೀಸ್ ಬೌಲರ್’ಗಳಿಗೆ ಸವಾಲಾದರು.

- Advertisement -

ಕ್ಯಾಪ್ಟನ್ ಕೊಹ್ಲಿ ಸ್ಥಾನದಲ್ಲಿ ಅವಕಾಶ ಪಡೆದ ಅಯ್ಯರ್, ಪಾದಾರ್ಪಣಾ ಪಂದ್ಯದಲ್ಲೇ ಅರ್ಧಶತಕಗಳಿಸಿ ಮಿಂಚಿದರು. ಅಯ್ಯರ್’ಗೆ ಉತ್ತಮ ಸಾಥ್ ನೀಡಿದ ಅನುಭವಿ ಆಲ್’ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್’ನಲ್ಲಿ 17ನೇ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಐದನೇ ವಿಕೆಟ್‌ಗೆ 34.4 ಓವರ್‌ ನಿಭಾಯಿಸಿರುವ ಅಯ್ಯರ್-ಜಡೇಜಾ ಜೋಡಿ 113 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. 75 ರನ್ ಗಳಿಸಿರುವ ಅಯ್ಯರ್ ಹಾಗೂ 50 ರನ್ ಗಳಿಸಿರುವ ಜಡೇಜಾ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ನ್ಯೂಜಿಲೆಂಡ್ ತಂಡದ ಪರ ಕೈಲ್ ಜೇಮಿಸನ್ 3 ವಿಕೆಟ್ ಪಡೆದರೆ, ಟಿಮ್ ಸೌಥಿ ಒಂದು ವಿಕೆಟ್ ಗಳಿಸಿದರು.

Join Whatsapp