ಲಕ್ನೋ: ಕಾನ್ಪುರ ಹಿರಿಯ ಐ.ಎ.ಎಸ್ ಅಧಿಕಾರಿ ಧಾರ್ಮಿಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಮತ್ತು ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮಾತ್ರವಲ್ಲ ಪ್ರಕರಣವನ್ನು ಸರ್ಕಾರ ಸಿಟ್ ತನಿಖೆಗೆ ಆದೇಶಿಸಿದೆ.
ಮಠ ಮಂದಿರ ಸಮನ್ವಯ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷ ಭೂಪೇಶ್ ಅವಸ್ಥಿ ಎಂಬವರು ಹಿರಿಯ ಐ.ಎ.ಎಸ್ ಅಧಿಕಾರಿ ಇಫ್ತಿಖರುದ್ದೀನ್ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಪ್ರಸ್ತುತ ಉ. ಪ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ತನ್ನ ಸೇವೆ ಸಲ್ಲಿಸುತ್ತಿರುವ ಮುಹಮ್ಮದ್ ಇಫ್ತಿಖರುದ್ದೀನ್ ಅವರ ವೀಡಿಯೋವನ್ನು ಅವಸ್ಥಿ ಬಿಡುಗಡೆ ಮಾಡಿದಾರೆ. ಐ.ಎ.ಎಸ್. ಅಧಿಕಾರಿ ಕಾನ್ಪುರದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಮೌಲಾನಾ ಧಾರ್ಮಿಕ ಪ್ರವಚನಗಳನ್ನು ಆಲಿಸುತ್ತಿರುವ ಜನರ ಗುಂಪೊಂದನ್ನು ತೋರಿಸುವ ವೀಡಿಯೋ ವೈರಲ್ ಆಗಿದ್ದು, ಪ್ರೇಕ್ಷಕರೊಂದಿಗೆ ಮಾತನಾಡುವ ಐ.ಎ.ಎಸ್ ಅಧಿಕಾರಿ ಧಾರ್ಮಿಕ ಮತಾಂತರ ಬಗ್ಗೆ ಮಾತನಾಡುತ್ತಿರುವುದು ಕಂಡು ಬಂದಿದೆ.
ಈ ಮಧ್ಯೆ ಪ್ರಕರಣವನ್ನು ಸರ್ಕಾರ, ಡಿಜಿ ಸಿಬಿಸಿಐಡಿ ಜಿ.ಎಲ್. ಮೀನಾ ನೇತೃತ್ವದ ವಿಶೇಷ ತನಿಖಾ ತಂಡ (ಎಸ್.ಐ.ಟಿ) ದಿಂದ ತನಿಖೆಗೆ ಆದೇಶಿಸಿದೆ. ಮಾತ್ರವಲ್ಲ ಏಳು ದಿನಗಳ ಅವಧಿಯೊಳಗೆ ವರದಿಯನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಸೂಚಿಸಿದೆ ಎಂದು ಗೃಹ ಇಲಾಖೆ ತನ್ನ ಹೇಳಿಕೆ ಸ್ಪಷ್ಟಪಡಿಸಿದೆ.