ಕಾನ್ಪುರ: ಕಾಳಿಂದಿ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿಸುವ ಯತ್ನ ನಡೆದಿದ್ದು, ಹಳಿಯಲ್ಲಿ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಬಾಟಲಿಗಳು ಸಿಕ್ಕಿವೆ.
ಅಪಾಯಕಾರಿ ವಸ್ತುಗಳು ಹಳಿಗಳ ಮೇಲೆ ಪತ್ತೆಯಾದ ನಂತರ ದೊಡ್ಡ ರೈಲು ದುರಂತವನ್ನು ತಪ್ಪಿಸಲಾಗಿದೆ.
ನಿನ್ನೆ ರಾತ್ರಿ 8.25 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾಳಿಂದಿ ಎಕ್ಸ್ ಪ್ರೆಸ್ ಬರಜ್ ಪುರ ನಿಲ್ದಾಣದಿಂದ ಹೊರಟು 2.3 ಕಿಲೋಮೀಟರ್ ದೂರದಲ್ಲಿದ್ದಾಗ ಹಳಿಗಳ ಮೇಲೆ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಗೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ದೊಡ್ಡ ಶಬ್ದವನ್ನು ಕೇಳಿದ ಲೊಕೊ ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿದ್ದಾರೆ.
ಬಳಿಕ ಇಳಿದು ನೋಡಿದಾಗ ಅಪಾಯಕಾರಿ ವಸ್ತುಗಳು ಹಳಿಯಲ್ಲಿರುವುದು ಕಂಡುಬಂದಿತ್ತು. ತಕ್ಷಣ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಗೆ ಮಾಹಿತಿ ನೀಡಲಾಗಿತ್ತು. ಪ್ರದೇಶದ ಸಂಪೂರ್ಣ ಶೋಧ ನಡೆಸಲಾಯಿತು. ರೈಲಿಗೆ ಡಿಕ್ಕಿಯಾದ ಕಾರಣ ಸಿಲಿಂಡರ್ ಹಳಿಯಿಂದ ತುಂಬಾ ದೂರ ಹೋಗಿ ಬಿದ್ದಿದೆ.