ಕಣ್ಣೂರು: RSS ಮುಖಂಡರ ಮನೆಗಳಲ್ಲಿ 770 ಕೆಜಿ‌ ಸ್ಫೋಟಕಗಳು ಪತ್ತೆ

Prasthutha|

ಕಣ್ಣೂರು: ಆರೆಸ್ಸೆಸ್ ಮುಖಂಡ ಮತ್ತು ಆತನ ಸಂಬಂಧಿಕರ ಮನೆಗಳಿಂದ ಬೃಹತ್ ಪ್ರಮಾಣದ ಸ್ಫೋಟಕಗಳನ್ನು ಪೊಲೀಸರು ಪತ್ತೆ ಹಚ್ಚಿದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಪೊಯಿಲೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

- Advertisement -

ಆರೆಸ್ಸೆಸ್ ಮುಖಂಡ ಮತ್ತು ಆತನ ಸಂಬಂಧಿಕರ ನಿವಾಸದಿಂದ 770 ಕೆಜಿ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.

RSSನ ಸ್ಥಳೀಯ ಮುಖಂಡ ವಡಕಯಿಲ್ ಪ್ರಮೋದ್ ಮತ್ತು ಅತನ ಸಂಬಂಧಿ ವಡಕಯಿಲ್ ಶಾಂತಾ ಅವರ ಮನೆಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

- Advertisement -

ಖಚಿತ ಮಾಹಿತಿಯ ಆಧಾರದ ಮೇಲೆ ಕೊಲವಲ್ಲೂರು ಪೊಲೀಸ್ ಇನ್ಸ್‌ಪೆಕ್ಟ‌ರ್ ಸುಮೀತ್ ಕುಮಾರ್ ಮತ್ತು ಸಬ್ ಇನ್ಸ್‌ಪೆಕ್ಟ‌ರ್ ಸೋಬಿನ್ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಿ ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಳವಲ್ಲೂರು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಫೋಟಕಗಳನ್ನು ಅಕ್ರಮವಾಗಿ ವಿತರಿಸಲು ಸಂಗ್ರಹಿಸಿಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ಪ್ತಿಳಿದು ಬಂದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದೇವೆ. ಆ ಪ್ರದೇಶದ ಸುರಕ್ಷತೆಗೆಗಾಗಿ ಭದ್ರತೆಯನ್ನು ಹೆಚ್ಚಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ ಎನ್ನಲಾಗಿದೆ.

ಕಳೆದ ವರ್ಷ ಇದೇ ಕಣ್ಣೂರಿನ ಎರಂಜೋಲಿಪಾಲಂ ಬಳಿ ಬಾಂಬ್ ತಯಾರಿಕೆ ವೇಳೆ ಸ್ಫೋಟ ಸಂಭವಿಸಿ RSS ಹಿನ್ನೆಲೆಯ ಯುವಕ ವಿಷ್ಣು (20) ತೀವ್ರ ಗಾಯಗೊಂಡಿದ್ದು, ಆತನ ಅಂಗೈ ಒಡೆದು ಛಿದ್ರವಾಗಿತ್ತು.



Join Whatsapp