ಅಬುಧಾಬಿಯಲ್ಲಿ ಕನ್ನಡಿಗರ ಮೀಲಾದ್ ಕಾನ್ಫರೆನ್ಸ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

Prasthutha|

ಯುಎಇ : ಎಸ್.ಕೆ.ಎಸ್.ಎಸ್.ಎಫ್. ಅಬುಧಾಬಿ ಕರ್ನಾಟಕ ವತಿಯಿಂದ ಬೃಹತ್ ಕರ್ನಾಟಕ ಮೀಲಾದ್ ಕಾನ್ಫರೆನ್ಸ್ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವು ಅಬುಧಾಬಿಯ ಮದೀನತ್ ಝಾಯೆದ್ ಶಾಪಿಂಗ್ ಸೆಂಟರ್ ಪಾರ್ಟಿ ಹಾಲ್ ನಲ್ಲಿ ನಡೆಯಿತು.

- Advertisement -

ಮೀಲಾದ್ ಕಾನ್ಫರೆನ್ಸ್ ಭಾಗವಾಗಿ ನಡೆದ ಪುಟಾಣಿ ಮಕ್ಕಳ ಬಾಲ್ಯೋತ್ಸವ ಸ್ಪರ್ಧೆಯಲ್ಲಿ ಸುಮಾರು 35 ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮಕ್ಕಳ ಕಿರಾಅತ್, ಮಧ್ಹ್ ಹಾಡು, ಭಾಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿತು.

ಕಾರ್ಯಕ್ರಮದಲ್ಲಿ ಸುದೀರ್ಘವಾದ ಪ್ರವಾಸಿ ಜೀವನದಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾಡಿದ ಗಣನೀಯ ಸೇವೆಗಳಿಗಾಗಿ ಹಿರಿಯ ಸುನ್ನೀ ನೇತಾರ ಹಾಜಿ ಮೊಹಿದ್ದೀನ್ ಕುಟ್ಟಿ ಕಕ್ಕಿಂಜೆ ಮತ್ತು ಎಸ್.ಕೆ.ಎಸ್.ಎಸ್.ಎಫ್. ಕರ್ನಾಟಕ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಅವರಿಗೆ ಎಸ್ ಕೆ ಎಸ್ ಎಸ್ ಎಫ್ ಪಿನಾಕಲ್ ಅವಾರ್ಡ್ 2023 ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

- Advertisement -

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಬುಧಾಬಿ ಸುನ್ನೀ ಸೆಂಟರ್ ಅಧ್ಯಕ್ಷ ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ತಂಙಳ್, ಇಂದಿನ ಕಾಲಘಟ್ಟದಲ್ಲಿ ಯುವಕರಲ್ಲಿ ಧಾರ್ಮಿಕ ಜ್ಞಾನವನ್ನು ಬೆಳೆಸಲು ಮೀಲಾದ್ ಕಾರ್ಯಕ್ರಮ ಸಹಕಾರಿ ಎಂದು ನುಡಿದರು. ಈ ಕಾರ್ಯಕ್ರಮ ಮಾಡಿದ SKSSF ಅಬುಧಾಬಿ ಕರ್ನಾಟಕದ ಕಾರ್ಯ ವೈಖರಿಯನ್ನು ಅವರು ಶ್ಳಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಕೆ.ಎಸ್.ಎಸ್.ಎಫ್. ಅಬುಧಾಬಿ ಕರ್ನಾಟಕ ಸಮಿತಿಯ ಅಧ್ಯಕ್ಷ ಶಹೀರ್ ಹುದವಿ ಉಸ್ತಾದ್, ಮಹಮ್ಮದ್ ಪೈಗಂಬರ್ ಸ.ಅ.ರವರು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನೀಡಿದ ಗೌರವ ಹಾಗೂ ಪ್ರೀತಿಯ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ SKSSF ಯುಎಇ ಕರ್ನಾಟಕದ ರಾಜ್ಯಾಧ್ಯಕ್ಷ ಅಸ್ಸಯ್ಯದ್ ಅಸ್ಕರ್ ಅಲೀ ತಂಙಳ್, ಗೌರವಾಧ್ಯಕ್ಷ ಹನೀಫ್ ಹರಿಯಮೂಲೆ, ಹಾಫಿಲ್ ಝೈನ್ ಸಖಾಫಿ, ಉಸ್ತಾದ್ ರಖೀಬ್ ಹುದವಿ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.

ಮಕ್ಕಳು,ಮಹಿಳೆಯರೂ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚಿನ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಬುರ್ದಾ ಮಜ್ಲಿಸ್ ಹಾಗೂ ಇಷ್ಕೇ ಮಜ್ಲಿಸ್ ನಡೆಯಿತು. ಅನ್ನದಾನ ಮಾಡಲಾಯಿತು.


ಕಾರ್ಯಕ್ರಮವನ್ನು ಶಾಕೀರ್ ಕೂರ್ನಡ್ಕ ಹಾಗೂ ಅಶ್ರಫ್ ಪೆರುವಾಯಿ ನಿರೂಪಿಸಿದರು. ಯಹ್ಯಾ ಕೊಡ್ಲಿಪೇಟೆ ವಂದನಾರ್ಪಣೆ ಮಾಡಿದರು.

Join Whatsapp