ಅಬ್ಬಬ್ಬಾ ಲಾಟರಿ; ಕೇರಳದಲ್ಲಿ ಕಮಾಲ್ ಮಾಡಿದ ಕನ್ನಡಿಗ: 25 ಕೋಟಿ ರೂ. ಗೆದ್ದ ಮೆಕ್ಯಾನಿಕ್ ಅಲ್ತಾಫ್

Prasthutha|

ಮಂಡ್ಯ: ಕೇರಳದ ಲಾಟರಿ ಮಂಡ್ಯ ಜಿಲ್ಲೆ ಪಾಂಡವಪುರ ನಿವಾಸಿ ಮೆಕ್ಯಾನಿಕ್ ಅಲ್ತಾಫ್ ಪಾಲಾಗಿದ್ದು, ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಲಾಟರಿಯನ್ನು ಗೆದ್ದುಕೊಂಡಿದ್ದಾರೆ.

- Advertisement -


ಕೆಲ ದಿನಗಳ ಹಿಂದೆ ಕೆಲಸದ ನಿಮಿತ್ತ ಕೇರಳಕ್ಕೆ ತೆರಳಿದ್ದ ಅಲ್ತಾಫ್ 500 ರೂ ಕೊಟ್ಟು ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಖರೀದಿ ಮಾಡಿದ್ದ ಲಾಟರಿ ಟಿಕೆಟ್ ಗೆ ಬಂಪರ್ ಬಹುಮಾನ ಬಂದಿದ್ದು, ತೆರಿಗೆ ಕಳೆದು ಅಲ್ತಾಫ್ ಗೆ 17.5 ಕೋಟಿ ರೂ. ಮೊತ್ತ ಸಿಗಲಿದೆ.


ಬಹುಮಾನದ ಹಣ ತರಲು ಅಲ್ತಾಫ್ ಹಾಗೂ ಕುಟುಂಬಸ್ಥರು ಕೇರಳಕ್ಕೆ ದೌಡಾಯಿಸಿದ್ದು, ಲಾಟರಿ ಭಾಗ್ಯದಲ್ಲಿ ಬಡ ಮೆಕ್ಯಾನಿಕ್ ಕೋಟ್ಯಾಧಿಪತಿಯಾಗಿದ್ದಾರೆ.

- Advertisement -


ಪ್ರತಿ ವರ್ಷ ಓಣಂ ಹಬ್ಬದ ಸಂದರ್ಭದಲ್ಲಿ ಕೇರಳದಲ್ಲಿ ನಡೆಯುವ ರಾಜ್ಯ ಲಾಟರಿಯ ಲಕ್ಕಿ ಡ್ರಾ ರಿಸಲ್ಟ್ ಅಕ್ಟೋಬರ್ 09ರಂದು ಪ್ರಕಟವಾಗಿದ್ದು, ಇದರಲ್ಲಿ ಅಲ್ತಾಫ್ ಮಾತ್ರವಲ್ಲದೇ. ಓಣಂ ತಿರುಓಣಂ ಬಂಪರ್ ಬಿಆರ್ 99 ಹೆಸರಿನಲ್ಲಿ ಈ ಲಾಟರಿಯನ್ನು ನಡೆಸಲಾಗುತ್ತದೆ. ಈ ಬಾರಿ 71,35,938 ಟಿಕೆಟ್ ಗಳು ಮಾರಾಟವಾಗಿದ್ದವು. ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್ ಗಳು ಮಾರಟವಾಗಿದ್ದವು.


ಲಾಟರಿಯಲ್ಲಿ ಗೆದ್ದವರಿಗೆ ಮೊದಲ ಬಹುಮಾನವಾಗಿ 25 ಕೋಟಿ ರೂ. ಸಿಗಲಿದ್ದು, 2ನೇ ಬಹುಮಾನ ಪಡೆಯುವ 20 ಮಂದಿಗೆ ತಲಾ 1 ಕೋಟಿ ರೂ. ಹಾಗೂ 3ನೇ ಬಹುಮಾನ ಗೆಲ್ಲುವ 20 ಮಂದಿಗೆ ತಲಾ 50 ಲಕ್ಷ ರೂ.ಗಳನ್ನು ನೀಡಲಾಗುತ್ತದೆ.



Join Whatsapp