ಕನ್ನಡ ಸಾಹಿತ್ಯ ಸಮ್ಮೇಳನ ಧರ್ಮದ ಸಮ್ಮೇಳನವಾಗಿದೆ, ನಾನು ಬಹಿಷ್ಕರಿಸುತ್ತೇನೆ: ವಿಶ್ವನಾಥ್

Prasthutha|

ಮಡಿಕೇರಿ: ಕನ್ನಡ ಸಾಹಿತ್ಯ ಸಮ್ಮೇಳನ ಜಾತಿ ಧರ್ಮದ ಸಮ್ಮೇಳನವಾಗಿದೆ. ಅದನ್ನು ಬಹಿಷ್ಕರಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ತಿಳಿಸಿದ್ದಾರೆ.

- Advertisement -


ಸಾಹಿತ್ಯ ಸಮ್ಮೇಳನವು ಜಾತಿ ಧರ್ಮದ ಸಮ್ಮೇಳನವಾಗಿದೆ. ಜೊತೆಗೆ ಅದೊಂದು ದಿಕ್ಕುದೆಸೆ ಇಲ್ಲದ ಸಮ್ಮೇಳನ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ₹20 ಕೋಟಿ ಹಣ ನೀಡಿದೆ. ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲೆ ಸಮ್ಮೇಳನ ನಡೆಯುತ್ತಿದೆ. ಒಂದೇ ಒಂದು ಪೂರ್ವಸಿದ್ಧತಾ ಸಭೆಯನ್ನೂ ನಡೆಸಿಲ್ಲ. ಈಗಾಗಲೇ ಹಲವರಿಂದ ಅಸಮಾಧಾನಗಳು ಹೊರಹೊಮ್ಮಿವೆ. ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನನಗೂ ಆಹ್ವಾನ ಪತ್ರಿಕೆ ಕಳುಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ರಾಜಕೀಯ ಪಕ್ಷದ ಸಮ್ಮೇಳನದಂತೆ ಆಹ್ವಾನ ಪತ್ರಿಕೆ ಕಾಣುತ್ತಿದೆ. ಸನ್ಮಾನಿತರಲ್ಲಿ ಒಬ್ಬರೂ ಮುಸ್ಲಿಮರಿಲ್ಲ. ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಆ ಕುರಿತು ಒಂದೇ ಒಂದು ವಿಚಾರ ಗೋಷ್ಠಿಯೂ ಇಲ್ಲ. ಪ್ರಜಾತಂತ್ರದ ಜೀವಾಳವಾದ ಮತದಾನದ ಹಕ್ಕನ್ನೇ ಕಸಿಯಲಾಗುತ್ತಿದೆ. ಆ ಕುರಿತು ಒಂದೂ ಗೋಷ್ಠಿಯೂ ಇಲ್ಲ. ಇದೊಂದು ಡೋಂಗಿ ಸಮ್ಮೇಳನ ಎಂದು ಕಿಡಿಕಾರಿದರು.

Join Whatsapp