ಕಲೆ, ಕಲಾವಿದರನ್ನು ಗುರುತಿಸುವ ಜೊತೆಯಲ್ಲಿ ಸ್ವಯಂ ಸೇವಾ ಸಂಘಟನೆಯನ್ನೂ ಗುರುತಿಸಬೇಕು

Prasthutha|

 ಬೆಂಗಳೂರು: ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ನ್ಯೂಸ್ ಪೇಪರ್ ಆಫ್ ಕರ್ನಾಟಕ ವತಿಯಿಂದ ಕನ್ನಡ ರಾಜ್ಯೋತ್ಸವ-2022 ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ನಡೆಯಿತು.

- Advertisement -

   ಅವಧೂತ ವಿನಯ್ ಗುರೂಜಿ, ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ನಟ ಅಜಿತ್, ಅಧ್ಯಕ್ಷರಾದ ಶ್ರಾವಣ್ ಲಕ್ಷ್ಮಣ್ ರವರು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ,ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿದರು.   

ವಿನಯ್ ಗುರೂಜಿ ಮಾತನಾಡಿ, ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ಸರಳ, ಸುಂದರ ಭಾಷೆಯಾಗಿದೆ. ಮಾತನಾಡಲು ಸಹ ಸುಲಭ.  ಪ್ರಶಸ್ತಿ ನಾವು ಹುಡುಕಿಕೊಂಡು ಹೋಗಬಾರದು, ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬಂದಾಗ ಚೆನ್ನ ಎಂದರು.

- Advertisement -

   ಇಂದು ಸನ್ಮಾನಿತರು ಸಮಾಜದಲ್ಲಿ ಅವರು ಮಾಡಿದ ಸೇವೆಗಾಗಿ ಗೌರವ ನೀಡಲಾಗುತ್ತಿದೆ. ಇದರಿಂದ ಅವರು ಇನ್ನು ಹೆಚ್ಚು ಸೇವೆ ಮಾಡುವಂತಾಗುತ್ತದೆ ಮತ್ತು ಸರ್ಕಾರದ ಗಮನಕ್ಕೂ ಬರಲಿದೆ ಎಂದು ಹೇಳಿದರು.  ಕನ್ನಡ ರಾಜ್ಯೋತ್ಸವ -2022 ಪ್ರಶಸ್ತಿ 67 ಸಾಧಕರಿಗೆ ನೀಡಿ ಗೌರವಿಸಲಾಯಿತು.

Join Whatsapp