ಬೆಂಗಳೂರು: ಪ್ರೋ ಕಬಡ್ಡಿ ಪಂದ್ಯಾವಳಿಗೆ ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಬ್ರ್ಯಾಂಡ್ ಸೆಂಟ್ರಲ್ ಪ್ರಾಯೋಜಕತ್ವ ವಹಿಸಲು ಮುಂದಾಗಿದೆ.
ಪ್ರೋ ಕಬಡ್ಡಿ ಜೊತೆಗೆ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯ ಪ್ರಯೋಜಕತ್ವವನ್ನೂ ಕೆಎಂಎಫ್ ಪಡೆಯುತ್ತಿದೆ. ಈ ಎರಡು ಪಂದ್ಯಾವಳಿಗಳು ದೇಶದ ವಿವಿಧ ಸ್ಥಳಗಳಲ್ಲಿ ನಡೆಯುವುದರಿಂದ ಬ್ರ್ಯಾಂಡ್ ಪ್ರಮೋಷನ್ ಆಗಲಿದೆ. ಈ ಪಂದ್ಯಾವಳಿಗಳಲ್ಲಿ ಎಲ್ ಇಡಿ ಬೋರ್ಡ್, ಟೈಟಲ್, ಪೋಸ್ಟರ್ ಗಳಲ್ಲಿ ನಂದಿನಿ ರಾರಾಜಿಸಲಿದೆ ಎಂದು ಕೆಎಂಎಫ್ ಎಂಡಿ ಜಗದೀಶ್ ತಿಳಿಸಿದ್ದಾರೆ.
ಇಂಡಿಯನ್ ಸೂಪರ್ ಲೀಗ್ ಪುಟ್ಬಾಲ್ ನ 11ನೇ ಸೀಸನ್ ಸೆ.13 ರಿಂದ ಆರಂಭವಾಗಲಿದೆ. ಪಂದ್ಯದಲ್ಲಿ 13 ತಂಡಗಳು ಸ್ಪರ್ಧಿಸಲಿವೆ. ಈ ಪಂದ್ಯಾವಳಿ ಕೋಲ್ಕತ್ತಾ, ದೆಹಲಿ, ಕೇರಳ ಸೇರಿದಂತೆ ಹಲವೆಡೆ ನಡೆಯಲಿದೆ. ಜೊತೆಗೆ ಪ್ರೋ ಕಬಡ್ಡಿ ಪಂದ್ಯಾವಳಿಯ ಸೆಂಟ್ರಲ್ ಸ್ಪಾನ್ಪರ್ ಶಿಪ್ ಸಹ ಪಡೆಯಲು ಕೆಎಂಎಫ್ ಮುಂದಾಗಿದೆ. ಈ ಎರಡು ಪಂದ್ಯಾವಳಿಗಳ ಸೆಂಟ್ರಲ್ ಟೈಟಲ್, ಎಲ್ ಇಡಿ ಬೋರ್ಡ್ ಗಳು, ಪ್ರೆಸೆಂಟೇಶನ್ ಬ್ಯಾಕ್ ಡ್ರಾಪ್ ಗಳು ಸೇರಿ ವಿವಿಧ ರೀತಿಯಲ್ಲಿ ಪ್ರಾಯೋಜಕತ್ವದ ಗುರಿಯನ್ನು ಕೆಎಂಎಫ್ ಹೊಂದಿದೆ.