ಕಾಣಿಯೂರು ಘಟನೆ ಸರ್ಕಾರ, ಪೊಲೀಸರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ: ಜೆ.ಆರ್. ಲೋಬೋ

Prasthutha|

ಮಂಗಳೂರು: ಕಾಣಿಯೂರು ಬಳಿ ಹೊಟ್ಟೆ ಪಾಡಿಗೆ ಬಟ್ಟೆ ವ್ಯಾಪಾರ ಮಾಡುವ ಇಬ್ಬರು ಮುಸ್ಲಿಮ್ ಯುವಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನಡೆದಿದ್ದು, ಇದು ಸರಕಾರ, ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದು ಮಾಜಿ ಶಾಸಕ ಜೆ. ಆರ್. ಲೋಬೋ  ಟೀಕಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಿನ್ನೆ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದೇನೆ. ಇದು ಅನೈತಿಕ, ಕಾನೂನು ಬಾಹಿರ ಎಂದು ಹೇಳಿದರು.

ಇತ್ತೀಚೆಗೆ ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರು ಟೋಲ್ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ಅವರನ್ನು ಗುರಿಯಾಗಿಸಿ ಅವರ ವಿರುದ್ಧ ಅಸಹ್ಯ ಪ್ರಚಾರ ಮಾಡಲಾಗಿದೆ. ಚಾನೆಲ್ ಗಳೂ ಈ ಅಸಹ್ಯ ಕೆಲಸ ಮಾಡಿವೆ. ಕಾಣಿಯೂರು ಬಳಿ ಹಲ್ಲೆ ಮತ್ತು ಪ್ರತಿಭಾ ಕುಳಾಯಿ ಮೇಲೆ ನಡೆದ ಅನೈತಿಕ ಪ್ರಚಾರಕ್ಕೆ ಕೆಲವರ ದ್ವೇಷ ಭಾಷಣಗಳೇ ಕಾರಣ. ಪೊಲೀಸರು ಜನರನ್ನು ಕಾಪಾಡಲು ಇರುವವರು. ಅವರು ಕಾನೂನು ಪಾಲನೆಗಿಂತ ಆಳುವವರ ಕೈಗೊಂಬೆ ಆಗಿರುವುದು ಸರಿಯಲ್ಲ ಎಂದು ಲೋಬೋ ತಿಳಿಸಿದರು.

- Advertisement -

ಚಿರತೆ ಬಸಿರಾದಂತಹ ಕಾರ್ಟೂನ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಕ್ಕೆ ಹೋರಾಟಗಾರರೊಬ್ಬರನ್ನು ಬಂಧಿಸಿರುವುದು   ಏನನ್ನು ಸೂಚಿಸುತ್ತದೆ. ಕಾನೂನು ಮುರಿಯುವ ಎಲ್ಲರ ಮೇಲೆ ಕೆಲಸ ಕ್ರಮ ತೆಗೆದುಕೊಳ್ಳಿ. ಪೊಲೀಸರು ಜನರಿಗೆ ನ್ಯಾಯ ದೊರಕಿಸಲಿ. ಸಂವಿಧಾನದ ಪ್ರಕಾರ ದೇಶ ನಡೆಯಲಿ ಎಂದು ಲೋಬೋ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಚಂದ್ರಕಲಾ, ಶಾಂತಲಾ ಗಟ್ಟಿ, ಹಮೀದ್, ಅಶ್ರಫ್, ಟಿ. ಕೆ. ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.



Join Whatsapp