ಸರ್ಕಾರವನ್ನು ಉರುಳಿಸದಿರಲು ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳನ್ನು ನೀಡಿದ್ದೇವೆ : ಕನಿಮೋಳಿ

Prasthutha|

ಚೆನ್ನೈ:  ಸರ್ಕಾರವನ್ನು ಉರುಳಿಸದಿರಲು ತಮಿಳುನಾಡಿನ ಜಾತ್ಯತೀತ ಮೈತ್ರಿಕೂಟದಲ್ಲಿ  ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳನ್ನು ನೀಡಿದ್ದೇವೆ ಎಂದು ಡಿಎಂಕೆ ಸಂಸದೆ ಕನಿಮೋಳಿ ಹೇಳಿದ್ದಾರೆ. ಹಲವಾರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಜಯಗಳಿಸಿದ ನಂತರ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಪಕ್ಷಾಂತರಗೊಂಡು ಸರ್ಕಾರವನ್ನು ಉರುಳಿಸಿದ ಘಟನೆಗಳನ್ನು ಉಲ್ಲೇಖಿಸಿ ಕನಿಮೋಳಿ ಕಾಂಗ್ರೆಸ್ ಮೇಲಿನ ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

- Advertisement -

“ಅನೇಕ ರಾಜ್ಯಗಳಲ್ಲಿ ಗೆದ್ದು ಅಧಿಕಾರಕ್ಕೇರಿದ ಸರ್ಕಾರಗಳನ್ನು ಬಿಜೆಪಿ ಉರುಳಿಸಿರುವುದನ್ನು ನೀವು ನೋಡಿರಬಹುದು. ಚುನಾವಣೆಗೆ ಒಂದು ತಿಂಗಳ ಮೊದಲು ಪುದುಚೇರಿಯಲ್ಲೂ ಅದೇ ಘಟನೆ ನಡೆದಿದೆ. ಆದ್ದರಿಂದ, ಡಿಎಂಕೆ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಮಾತ್ರ ಸ್ಥಿರ ಸರ್ಕಾರ ರಚಿಸಬಹುದು. ಇದನ್ನು ಮನಗಂಡು ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳಿಗೆ ಕಡಿಮೆ ಸ್ಥಾನಗಳನ್ನು ನೀಡಲಾಗಿದೆ” ಎಂದು ಕನಿಮೋಳಿ ಹೇಳಿದರು.

Join Whatsapp