ಟೈಲರ್ ಕನ್ಹಯ್ಯಾ ಲಾಲ್ ಕೊಲೆ ಪ್ರಕರಣ: ಆರೋಪಿಗೆ ಜಾಮೀನು

Prasthutha|

- Advertisement -

ಜೈಪುರ: 2022ರಲ್ಲಿ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ರನ್ನು ಕೊಲೆಗೈದ ಪ್ರಕರಣದ ಆರೋಪಿ ಮುಹಮ್ಮದ್ ಜಾವೇದ್ ಗೆ ರಾಜಸ್ಥಾನ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.

ಮುಹಮ್ಮದ್ ಜಾವೇದ್‌ಗೆ 2 ಲಕ್ಷ ರೂಪಾಯಿ ಶೂರಿಟಿ ಪಡೆದು ರಾಜಸ್ಥಾನ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.

- Advertisement -

ನ್ಯಾಯಮೂರ್ತಿ ಪಂಕಜ್ ಭಂಡಾರಿ ಮತ್ತು ನ್ಯಾಯಮೂರ್ತಿ ಪ್ರವೀರ್ ಭಟ್ನಾಗರ್ ಅವರಿದ್ದ ಹೈಕೋರ್ಟ್‌ ವಿಭಾಗೀಯ ಪೀಠ ಜಾಮೀನು ಮಂಜೂರು ಮಾಡಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಜಾವೇದ್ ನನ್ನು ಉದಯಪುರದಿಂದ 2022 ಜುಲೈ 22ರಂದು ಬಂಧಿಸಿತ್ತು.

ಸ್ಥಳ ಪರಿಶೀಲನೆ ನಡೆಸಿ, ಕನ್ಹಯ್ಯಾ ಲಾಲ್ ತನ್ನ ಅಂಗಡಿಯಲ್ಲೇ ಇದ್ದಾರೆ ಎನ್ನುವ ಮಾಹಿತಿಯನ್ನು ಇತರ ಆರೋಪಿಗಳಿಗೆ ಕಳುಹಿಸುವ ಮೂಲಕ ಜಾವೇದ್ ಈ ಕೊಲೆ ಪ್ರಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾನೆ ಎಂದು ಎನ್ಐಎ ಹೇಳಿತ್ತು.

ಪ್ರಮುಖ ಆರೋಪಿಗಳಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಫೌಸ್ ಮೊಹಮ್ಮದ್ 2022ರಲ್ಲಿ ಗ್ರಾಹಕರಂತೆ ನಟಿಸಿ ಕನ್ಹಯ್ಯಾ ಲಾಲ್ ಅಂಗಡಿಗೆ ತೆರಳಿ ಅವರನ್ನು ಹಾಡಹಗಲೇ ತಲೆ ಕಡಿದು ಬರ್ಬರವಾಗಿ ಕೊಂದಿದ್ದರು.



Join Whatsapp