‘ಕಂಗುವಾ’ ಸಿನಿಮಾ ಎಡಿಟರ್ ನಿಶಾದ್ ಯೂಸುಫ್ ಕೇರಳದಲ್ಲಿ ಶವವಾಗಿ ಪತ್ತೆ

Prasthutha|

ಕೊಚ್ಚಿ: ಖ್ಯಾತ ಸಿನಿಮಾ ಸಂಕಲನಕಾರ ನಿಶಾದ್ ಯೂಸುಫ್ ಇಂದು ಮುಂಜಾನೆ ಕೊಚ್ಚಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -


ತಡರಾತ್ರಿ 2 ಗಂಟೆ ಸುಮಾರಿಗೆ ಪಣಂಪಳ್ಳಿ ನಗರದ ಅಪಾರ್ಟ್ಮೆಂಟ್ನಲ್ಲಿ ಅವರ ಶವ ಪತ್ತೆಯಾಗಿದೆ.


ನಿಶಾದ್ ಅವರ ಸಾವನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

- Advertisement -


‘ತಲ್ಲುಮಾಲ’ ಸಿನಿಮಾದ ಅತ್ಯುತ್ತಮ ಸಂಕಲನಕ್ಕಾಗಿ 2022ರಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದ ನಿಶಾದ್ ಅವರು, ಚಾವೆರ್, ಉಂಡಾ, ಸೌದಿ ವೆಲ್ಲಕ್ಕ, ಒನ್, ಆಪರೇಷನ್ ಜಾವಾ, ಬಾಜೂಕಾ, ಮತ್ತು ಕಂಗುವ ಮುಂತಾದ ಚಿತ್ರಗಳಿಗೆ ಸಂಕಲನ ಮಾಡಿದ್ದಾರೆ.




Join Whatsapp