ರೈತರ ವಿರುದ್ಧ ಕಂಗನಾ ಪೋಸ್ಟ್: ಜನವರಿ 25 ರವರೆಗೆ ಬಂಧಿಸುವುದಿಲ್ಲ ಎಂದ ಮುಂಬೈ ಪೊಲೀಸ್

Prasthutha|

ಮುಂಬೈ: ರೈತರ ಪ್ರತಿಭಟನೆಯು ಪ್ರತ್ಯೇಕತವಾದಿ ಗುಂಪಿನೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಟಿ ಕಂಗನಾ ಅವರನ್ನು ಜನವರಿ 25, 2022 ರವರೆಗೆ ಬಂಧಿಸುವುದಿಲ್ಲ ಎಂದು ಮುಂಬೈ ಪೊಲೀಸರು ಸೋಮವಾರ ಬಾಂಬೈ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

- Advertisement -

ನ್ಯಾಯಮೂರ್ತಿಗಳಾದ ನಿತಿನ್ ಜಮ್ದಾರ್ ಮತ್ತು ಸಾರಂಗ್ ಕೊತ್ವಾಲ್ ಅವರನ್ನೊಳಗೊಂಡ ಪೀಠ ಈ ಕುರಿತು ಪ್ರತಿಕ್ರಿಯಿಸಿ ಕಂಗನಾ ಅವರ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ದೊಡ್ಡ ಪ್ರಶ್ನೆಯನ್ನು ಒಳಗೊಂಡಿದೆ ಎಂದು ತಿಳಿಸಿದೆ.

ಸಿಖ್ ಸಂಘಟನೆಯೊಂದು ನೀಡಿದ್ದ ದೂರಿನ ಮೇರೆಗೆ ಈ ವರ್ಷದ ನವೆಂಬರ್ ನಲ್ಲಿ ಮುಂಬೈ ಖಾರ್ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಿಸಲಾದ ಎಫ್.ಐ.ಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಕಂಗನಾ, ಈ ತಿಂಗಳ ಆರಂಭದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

- Advertisement -

ಹಿರಿಯ ವಕೀಲರಾದ ರಿಝ್ವಾನ್ ಸಿದ್ದೀಕಿ ಆರೋಪಿ ಪರ ನ್ಯಾಯಾಲಯದಲ್ಲಿ ವಾದಿಸಿದರು.

ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆಯನ್ನು ಖಲಿಸ್ತಾನಿ ಚಳುವಳಿ ಎಂದು ಬಿಂಬಿಸಿ ಕಂಗನಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನ ವಿರುದ್ಧ ಸಿಖ್ ಸಂಘಟನೆಯ ಸದಸ್ಯರು ನೀಡಿದ್ದ ದೂರಿನ ಆಧಾರದಲ್ಲಿ ಕಂಗನಾ ವಿರುದ್ಧ ಐಪಿಸಿ ಸೆಕ್ಷನ್ 295 – ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp