ಚಂಡಿಗಢ: ನೂತನ ಸಂಸದೆ ಕಂಗನಾ ರಣಾವತ್ ದೆಹಲಿಗೆ ತೆರಳುವಾಗ ವಿಮಾನ ನಿಲ್ದಾಣದಲ್ಲಿ ಅವರಿಗೆ ಕಪಾಳಮೋಕ್ಷ ಮಾಡಲಾಗಿದೆ.
ಚಂಡಿಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್ ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಕಂಗನಾರ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.
ಚಂಡೀಘಡ ಏರ್‌ಪೋರ್ಟ್‌ನಲ್ಲಿ ಘಟನೆ ನಡೆದಿದ್ದು, ವಿಚಾರವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಹಿಂದೆ ಕೇಂದ್ರ ಸರ್ಕಾರ ತರಲು ಹೊರಟಿದ್ದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡಿದ್ದ ರೈತರನ್ನು ಖಲಿಸ್ತಾನಿಗಳು ಎಂದು ಕಂಗನಾ ನಿಂದಿಸಿದ್ದರು. ಆ ಹೇಳಿಕೆಯಿಂದ ಸಿಟ್ಟಿಗೆದ್ದ ಸಿಐಎಸ್‌ಎಫ್ ಸಿಐಎಸ್‌ಎಫ್ ಪೇದೆ ಕುಲ್ವಿಂದರ್ ಕೌರ್ ಕಂಗನಾ ಕಪಾಳಕ್ಕೆ ಬಾರಿಸಿದ್ದಾರೆ ಎಂದು ವರದಿಯಾಗಿದೆ.
ಕಂಗನಾ ರಣಾವತ್ ಚಂಡೀಘಡದಿಂದ ದೆಹಲಿಗೆ ಪ್ರಯಾಣಿಸಲು ಚಂಡೀಘಡ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಸಿಐಎಸ್‌ಎಫ್ ಮಹಿಳಾ ಪೇದೆ ಕಂಗನಾರನ್ನು ನೋಡುತ್ತದ್ದಂತೆ ಆಕೆಯ ಕೆನ್ನೆಗೆ ಬಾರಿಸಿದ್ದಾರೆ. ನಂತರ ಸಂಸದೆ ಕಂಗನಾರನ್ನು ಅಲ್ಲಿಂದ ಸೂಕ್ತ ಭದ್ರತೆ ಒದಗಿಸಿ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ದಿಲ್ಲಿಗೆ ಆಗಮಿಸಿದ ನಂತರ, ಕಂಗನಾ ಸಿಐಎಸ್ಎಫ್ ಮಹಾನಿರ್ದೇಶಕ ನೀನಾ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.