ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಥಮ ವೈದ್ಯಕೀಯ ಸ್ನಾತಕೋತ್ತರ ಪದವಿ ತರಗತಿ ಉದ್ಘಾಟನೆ

Prasthutha|

ಮಂಗಳೂರು: ನಾಟೆಕಲ್ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ  ಪ್ರಥಮ ವೈದ್ಯಕೀಯ ಸ್ನಾತಕೋತ್ತರ ಪದವಿ ತರಗತಿಯನ್ನು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಕೆ. ರಮೇಶ್ ಉದ್ಘಾಟಿಸಿದರು.

- Advertisement -

ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,  “ಸ್ನಾತಕೋತ್ತರ ವಿದ್ಯಾರ್ಥಿಗಳು ಆಸ್ಪತ್ರೆಗಳ ಬೆನ್ನೆಲುಬು ಇದ್ದಂತೆ, ಯುದ್ಧದಲ್ಲಿ ಚಕ್ರವರ್ತಿಯ ಸ್ಥಾನದಂತೆ ಕೆಲಸ ಮಾಡಬೇಕಾದ ಅವರ ಹಿಂದೆ ಹಿರಿಯ, ಕಿರಿಯ ವೈದ್ಯ ಸಮೂಹವಿರುತ್ತದೆ. ರೋಗಿಗಳಲ್ಲಿರುವ ಸೋಂಕನ್ನು ಪತ್ತೆಹಚ್ಚುವ ಕುಶಲತೆಯನ್ನು ಬೆಳೆಸುವ ಜೊತೆಗೆ ಅವರ ಜೊತೆಗೆ ಹಾಗೂ ರೋಗಿಯ ಸಂಬಂಧಿಕರ ಜೊತೆಗೆ ಬಾಂಧವ್ಯ, ಸಹಾನುಭೂತಿ, ಸಂವಹನ, ಸಂಭಾಷಣೆ ಕೌಶಲ್ಯವನ್ನು ಬೆಳೆಸುವುದರಿಂದ ಬಹಳಷ್ಟು ಉಪಯೋಗವಿದೆ ಎಂದು ಹೇಳಿದರು.

ಎಂಬಿಬಿಎಸ್ ಪದವಿಯ ಅವಧಿ ಕಡಿತ ಹಾಗೂ ಸ್ನಾತಕೋತ್ತರ ವಿಭಾಗವನ್ನು ಎಂಬಿಬಿಎಸ್ ಜೊತೆಗೆ ವಿಲೀನಗೊಳಿಸುವ ಪ್ರಸ್ತಾಪನೆಗಳಿದ್ದು, ಈ ಕುರಿತು  ಸಂಬಂಧಪಟ್ಟ ಇಲಾಖೆಗಳು ಹಾಗೂ ತಜ್ಞರ ಜೊತೆಗೆ ಚರ್ಚಿಸುವ ವೇದಿಕೆಯನ್ನು  ಮುಂದಿನ ದಿನಗಳಲ್ಲಿ ನಡೆಸುವ ಚಿಂತನೆಯನ್ನು  ನಡೆಸಲಿದೆ ಎಂದು ಹೇಳಿದರು.

Join Whatsapp