ಕೋವಿಡ್ ಲಸಿಕೆ ಪೂರೈಕೆ | ಪ್ರಧಾನಿ ಮೋದಿ-ಕಮಲಾ ಹ್ಯಾರಿಸ್‌ ದೂರವಾಣಿ ಮಾತುಕತೆ

Prasthutha|

ನವದೆಹಲಿ : ಭಾರತಕ್ಕೆ ಕೋವಿಡ್‌ ಲಸಿಕೆ ಪೂರೈಕೆ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ದೂರವಾಣಿ ಕರೆ ಮೂಲಕ ಸಂವಾದ ನಡೆಸಿದ್ದಾರೆ. ಭಾರತಕ್ಕೆ ಲಸಿಕೆ ಪೂರೈಕೆ ಮಾಡುವುದಾಗಿ ಕಮಲಾ ಹ್ಯಾರಿಸ್‌ ಭರವಸೆ ನೀಡಿದ್ದಾರೆ.

- Advertisement -

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಜಾಗತಿಕ ಲಸಿಕೆ ಹಂಚಿಕೆ ಯೋಜನೆ ಘೋಷಿಸಿದ್ದು, ಅದರಡಿ ಭಾರತದ ನೆರವಿಗೆ ಸಿದ್ಧವಿರುವುದಾಗಿ ಕಮಲಾ ಹ್ಯಾರಿಸ್‌ ಘೋಷಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ಬೈಡನ್‌ ಮತ್ತು ಕಮಲಾ ಹ್ಯಾರಿಸ್‌ ಆಡಳಿತವನ್ನು ಪ್ರಧಾನ ಮೋದಿ ಶ್ಲಾಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತ-ಅಮೆರಿಕ ನಡುವಣ ಬಾಂಧವ್ಯ ಮತ್ತು ಎರಡನೇ ಅಲೆಯನ್ನು ಎದುರಿಸಲು ಭಾರತೀಯ ಅಮೆರಿಕನ್ನರು ನೀಡಿದ ಬೆಂಬಲಕ್ಕೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



Join Whatsapp