ಟೋಕಿಯೋ,ಜು.31: ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಭಾರತದ ಕಮಲ್ ಪ್ರೀತ್ ಕೌರ್ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಇದರೊಂದಿಗೆ ಪದಕ ಭಾರತಕ್ಕೆ ಒಲಿಯುವ ಸಾಧ್ಯತೆ ಇದೆ.
ಶನಿವಾರ ನಡೆದ ಮಹಿಳಾ ಡಿಸ್ಕಸ್ ಥ್ರೋನ ಬಿ ಗುಂಪಿನ ಪಂದ್ಯದಲ್ಲಿ 32 ಮಂದಿ ಅಥ್ಲೀಟ್’ಗಳು ಭಾಗವಹಿಸಿದ್ದರು.
64.0 ಮೀಟರ್ ದೂರ ಎಸೆದ ಕಮಲ್ ಪ್ರೀತ್ ಕೌರ್ ಅಂತಿಮ ಸುತ್ತಿಗೆ ಪ್ರವೇಶ ಪಡೆದರು. ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಕೊರಿಯಾದ ಸಂದರಾ ಪಿರ್ಕೋವಿಕ್ಸ್ 63.75 ಮೀಟರ್ ದೂರ ಎಸೆಯಲಷ್ಟೇ ಸಫಲರಾದರು.
66.42 ಮೀಟರ್ ದೂರ ಎಸೆದ ಅಮೆರಿಕದ ಅಲ್ ಮನ್ ವಲ್ಲರಿಯಾ, ಮೊದಲಿಗರಾಗಿ ಅರ್ಹತೆ ಪಡೆದಿದ್ದಾರೆ.
ಕಮಲ್ ಪ್ರೀತ್ ಕೌರ್ ಅವರು ಅರ್ಹತಾ ಸುತ್ತಿನಲ್ಲಿ ಒಟ್ಟಾರೆ 2ನೇ ಸ್ಥಾನ ಪಡೆಯುವ ಮೂಲಕ ಪದಕ ಸುತ್ತಿಗೆ ನೇರ ಅರ್ಹತೆ ಗಿಟ್ಟಿಸಿದ್ದಾರೆ. ಅರ್ಹತಾ ಸುತ್ತಿನ 3 ಪ್ರಯತ್ನಗಳಲ್ಲಿ ಕೌರ್, ಕ್ರಮವಾಗಿ 60.29, 63.97, ಮತ್ತು 64.0ಮೀಟರ್ ಡಿಸ್ಕಸ್ ಎಸೆದು ಅದ್ಭುತ ಸಾಧನೆ ಮಾಡಿದ್ದಾರೆ.
ಈ ಮೂಲಕ ಭಾರತದ ಪಾಳಯದಲ್ಲಿ ಮತ್ತೊಂದು ಪದಕದ ಕನಸು ಚಿಗುರಿದೆ.
ಆಗಸ್ಟ್ 2, ಸೋಮವಾರದಂದು ಡಿಸ್ಕಸ್ ಥ್ರೋ ಫೈನಲ್ ಪಂದ್ಯ ನಡೆಯಲಿದೆ. ಅರ್ಹತಾ ಸುತ್ತಿಗೆ ಕೇವಲ ಇಬ್ಬರು ಆಟಗಾರ್ತಿಯರು ಮಾತ್ರ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ನಡೆಯಲಿರುವ ಫೈನಲ್ ಪಂದ್ಯ ಭಾರೀ ಕುತೂಹಲ ಮೂಡಿಸಿದ್ದು, ಒಂದು ವೇಳೆ ಕೌರ್ ಚಿನ್ನದ ಪದಕ ಗೆದ್ದರೆ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.