ನಿವಾಸದಲ್ಲಿ ಹಾರಿಸಲಾಗಿದ್ದ ‘ಜೈ ಶ್ರೀ ರಾಮ್’ ಧ್ವಜವನ್ನು ತೆಗೆದು ಹಾಕಿದ ಕಮಲ್ ನಾಥ್

Prasthutha|

ನವದೆಹಲಿ: ತಮ್ಮ ನಿವಾಸದ ಮೇಲೆ ಹಾರಿಸಲಾಗಿದ್ದ “ಜೈ ಶ್ರೀ ರಾಮ್” ಧ್ವಜವನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ತೆಗೆದುಹಾಕಿದ್ದಾರೆ.

- Advertisement -


ನಿನ್ನೆ ದೆಹಲಿಯ ಕಮಲ್ ನಾಥ್ ಅವರ ನಿವಾಸದ ಛಾವಣಿಯ ಮೇಲೆ ಧ್ವಜ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.


ಕಮಲ್ ನಾಥ್ ಮತ್ತು ಅವರ ಪುತ್ರ ನಕುಲ್ ನಾಥ್ ಅವರು ಪಕ್ಷವನ್ನು ತೊರೆಯಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿವೆ.

- Advertisement -


ಮೂಲಗಳ ಪ್ರಕಾರ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪಕ್ಷದ ಹೀನಾಯ ಸೋಲಿನ ನಂತರ ಕಮಲ್ ನಾಥ್ ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದಕ್ಕಾಗಿ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp