ಕಲ್ಲಾಪು ಟ್ರಾಫಿಕ್ ಸಮಸ್ಯೆ: ಹೋರಾಟಕ್ಕೆ ನಾಗರಿಕ ಒಕ್ಕೂಟ ರಚನೆ

Prasthutha|

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನಲ್ಲಿ ಟ್ರಾಫಿಕ್ ಅವ್ಯವಸ್ಥೆ ಸುಗಮ ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಮತ್ತು ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ಸಂಘಟಿಸಲು ನೂತನ ನಾಗರಿಕ ಒಕ್ಕೂಟವನ್ನು ರಚಿಸಲಾಗಿದೆ.

- Advertisement -


ದಿನಾಂಕ 04.07.2024 ರಂದು ಕಲ್ಲಾಪುವಿನ ಯೂನಿಟಿ ಮಿನಿ ಹಾಲ್’ನಲ್ಲಿ ನಡೆದ ಸಭೆಯಲ್ಲಿ ನೂತನ ನಾಗರಿಕ ಒಕ್ಕೂಟ ರಚಿಸಲಾಗಿದ್ದು, ಒಕ್ಕೂಟದ ಅಧ್ಯಕ್ಷರಾಗಿ ಇಸಾಕ್ ಕಲ್ಲಾಪು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಮಾಸ್ಟರ್, ಪೌಲ್ ಕಲ್ಲಾಪು ಆಯ್ಕೆಯಾದರೆ, ಕಾರ್ಯದರ್ಶಿಗಳಾಗಿ ಅಬ್ದುಲ್ ರಶೀದ್, ಅಬ್ದುಲ್ ಲತೀಫ್ ಅವರನ್ನು ಆಯ್ಕೆಗೊಳಿಸಲಾಗಿದೆ.
ಸಮಿತಿ ಸದಸ್ಯರಾಗಿ ಮುಹಮ್ಮದ್ ಕಲ್ಲಾಪು, ಉಮರ್ ಉಲ್ ಫಾರೂಕ್, ಮುಹಮ್ಮದ್ ಮುಡುಪೋಡಿ, ಸಾದಿಕ್ ಕಲ್ಲಾಪು, ನವಾಜ್ ಕಲ್ಲಾಪು, ತೌಹೀದ್ ಕಲ್ಲಾಪು, ಫಯಾಜ್ ಕಲ್ಲಾಪು, ನಫೀಜ್ ಕಲ್ಲಾಪು, ಸಲೀಮ್ ಕಲ್ಲಾಪು, ಫೈರೋಜ್, ಇಸ್ಮಾಯಿಲ್ ಅಸ್ಟೋರಿಯಾ, ಫಾರೂಕ್ ಕಲ್ಲಾಪು, ಮುಹಮ್ಮದ್ ಶರೀಫ್ ಕಲ್ಲಾಪು, ಅಮೀರ್ ಕಲ್ಲಾಪು, ರಾಫಿ ಕಲ್ಲಾಪು, ಇಸ್ಮಾಯಿಲ್ ಸಾಗರ್, ಇಮ್ರಾನ್ ಕಲ್ಲಾಪು, ತಯ್ಯೂಬ್ ಕಲ್ಲಾಪು, ಮೊಹಿಯದ್ದಿ ಕಲ್ಲಾಪು, ಮನ್ಸೂರ್ ಕಲ್ಲಾಪು, ಕೌನ್ಸಿಲರ್’ಗಳಾದ ಅಸೀಫ್ ಕಲ್ಲಾಪು, ರಾಜೇಶ್ ಯು.ಬಿ, ಬಾಝಿಲ್ ಡಿಸೋಜ, ದಿನಕರ್ ಉಳ್ಳಾಲ್, ಮುಸ್ತಾಕ್ ಪಟ್ಲ , ಜೀವನ್ ಕೆರೆಬೈಲ್ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಕಲ್ಲಾಪುವಿನಲ್ಲಿ ನಡೆಯುವ ಟ್ರಾಫಿಕ್ ಸಮಸ್ಯೆಗಳನ್ನು ಈ ಕೆಳಗಿನ ಅಂಶಗಳನ್ನು ಚರ್ಚಿಸಿ ಕೆಲವು ನಿರ್ಣಯ ತೆಗೆಯಲಾಯಿತು.

- Advertisement -

ನಿರ್ಣಯಗಳು :
1) ಶಾಲಾ ಮತ್ತು ಮದ್ರಸ ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುವ ನಿಟ್ಟಿನಲ್ಲಿ ಶಾಲಾ ಮತ್ತು ಮಸೀದಿ ಆಡಳಿತ ಕಮಿಟಿ ಜಂಟಿಯಾಗಿ ಸೆಕ್ಯೂರಿಟಿ ಗಾರ್ಡ್ ಅನ್ನು ನೇಮಿಸುವುದು.
2) ಶಾಸಕರು, ಸಂಸದ, ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರ ಆಯುಕ್ತರನ್ನು ಭೇಟಿಯಾಗಿ ಮನವಿ ಸಲ್ಲಿಸುವುದು
3) ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು
4) ಟ್ರಾಫಿಕ್ ಸಮಸ್ಯೆಗಳ ಬೇಡಿಕೆ ಈಡೇರದೇ ಇದ್ದಲ್ಲಿ ರಸ್ತೆ ತಡೆ ನಡೆಸುವುದು.

Join Whatsapp