ಕಲ್ಲಾಪು | ಹಾಜಿ ಯು. ಮೂಸ ನಿಧನ

Prasthutha|

ಕಲ್ಲಾಪು: ಹಾಜಿ ಯು. ಮೂಸ (90) ಅವರು ಅಲ್ಪಕಾಲದ ಅಸೌಖ್ಯದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10 ಶನಿವಾರ, 2022ರ ತಡರಾತ್ರಿ 12.15ಕ್ಕೆ ನಿಧನರಾಗಿದ್ದಾರೆ.

- Advertisement -

ಕಲ್ಲಾಪುವಿನಲ್ಲಿ ಹಲವಾರು ವರ್ಷಗಳಿಂದ ಹಗ್ಗದ ವ್ಯವಹಾರವನ್ನು ನಡೆಸುತ್ತಿದ್ದ ಅವರು, ಊರಿಗೆ ಹಿರಿಯರಾಗಿದ್ದರು. ಮೃತ ಮೂಸಾಕ ಅವರು ಈ ಹಿಂದೆ  ಕಲ್ಲಾಪು ಜುಮಾ ಮಸ್ಜಿದ್ ಮತ್ತು ಉಳ್ಳಾಲ ದರ್ಗಾದ ಆಡಳಿತ ಮಂಡಳಿಯಲ್ಲಿ ಹಲವು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಮೃತರು ಪತ್ನಿ, 5 ಪುತ್ರರು, 4 ಪುತ್ರಿಯರು ಸೇರಿದಂತೆ ಹಲವಾರು ಬಂಧು, ಮಿತ್ರರನ್ನು ಅಗಲಿದ್ದಾರೆ.



Join Whatsapp