ಕಲ್ಲಾಪು | ಅಪಘಾತ ತಡೆಯಲು ತುರ್ತು ಕ್ರಮಕ್ಕೆ ಎಸಿಪಿ ಭೇಟಿಯಾದ ಕಲ್ಲಾಪು ನಾಗರಿಕ ಒಕ್ಕೂಟ

Prasthutha|

- Advertisement -

ಕಲ್ಲಾಪು: ರಾಷ್ಟ್ರೀಯ ಹೆದ್ದಾರಿ66ರ ಕಲ್ಲಾಪುವಿನಲ್ಲಿ ಅಪಘಾತ ತಡೆಯುವಿಕೆ ಸೇರಿದಂತೆ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಜರುಗಿಸುವಂತೆ ಕೋರಿ ಕಲ್ಲಾಪು ನಾಗರಿಕ ಒಕ್ಕೂಟ ದಿನಾಂಕ 11.06.2024 ರಂದು ಎಸಿಪಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು.

ಕಲ್ಲಾಪು ಎಂಬುದು ಅತ್ಯಧಿಕ ವಾಹನ ದಟ್ಟನೆಯ ಪ್ರದೇಶವಾಗಿದ್ದು,ನಿರಂತರ ಅಪಘಾತ ಆಗಿ ಈಗಾಗಲೇ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ ಹಲವರು ಅಂಗವೈಫಲ್ಯಕ್ಕೊಳಗಾಗಿದ್ದಾರೆ ಮತ್ತು ವಿದ್ಯಾರ್ಥಿ,ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ಸಾರ್ವಜನಿಕರು ರಸ್ತೆ ದಾಟಲು ಪರದಾಡುವಂತಾಗಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುರ್ತಾಗಿ ಟ್ರಾಫಿಕ್ ಸಿಗ್ನಲ್ ಒಳಗೊಂಡಂತೆ ಅಗತ್ಯ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಲಾಯಿತು.

- Advertisement -

ಈ ನಿಯೋಗದಲ್ಲಿ ಕಲ್ಲಾಪುವಿನ ಸಯ್ಯದ್ ಮದನಿ ಶಾಲೆ ಮುಖ್ಯ ಪ್ರಾಧ್ಯಾಪಕಿ ನಸೀಮಾ ಬಾನು, ಕಲ್ಲಾಪು ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಮೀರ್ ಹುಸೈನ್, ನಿಕಟಪೂರ್ವ ಅಧ್ಯಕ್ಷ ಉಮರ್ ಫಾರೂಕ್, ಹಿರಿಯರಾದ ಮುಹಮ್ಮದ್ ಕಲ್ಲಾಪು, ಸಮಾಜ ಸೇವಕರಾದ ಅಬ್ದುಲ್ ಲತೀಫ್ ಕಲ್ಲಾಪು, ಅಸೀಫ್ ಎ. ಆರ್, ಕೌನ್ಸಿಲರ್ ರಾಜೇಶ್ ಯು. ಬಿ, ಮಾಜಿ ಕೌನ್ಸಿಲರ್ ಪೌಲ್ ಡಿಸೋಜ, ನವಾಜ್ ಕಲ್ಲಾಪು ಉಪಸ್ಥಿತರಿದ್ದರು.

Join Whatsapp