ಕಲ್ಲಡ್ಕ: ಹೆದ್ದಾರಿಗೆ ಕುಸಿದ ನಿರ್ಮಾಣ ಹಂತದ ಪಿಲ್ಲರ್ !

Prasthutha|

ಬಂಟ್ವಾಳ: ನಿರ್ಮಾಣ ಹಂತದ ಪಿಲ್ಲರ್ ಹೆದ್ದಾರಿಗೆ ಕುಸಿದು ಬಿದ್ದ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ.

- Advertisement -


ಚತುಷ್ಪಥ ರಸ್ತೆ ಕಾಮಗಾರಿ ಕಲ್ಲಡ್ಕದಲ್ಲಿ ನಡೆಯುತ್ತಿದ್ದು, ಫ್ಲೈ ಓವರ್ ನ ಪಿಲ್ಲರ್ ಮಧ್ಯಾಹ್ನದ ವೇಳೆಗೆ ಹಠಾತ್ ಕುಸಿದು ಬಿದ್ದಿದೆ. ಪಿಲ್ಲರ್ ಬಿದ್ದ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಕೆಲಹೊತ್ತು ಟ್ರಾಫಿಕ್ ಜಾಮ್ ಕೂಡ ಎದುರಾಗಿದೆ.

ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಅವೈಜ್ಞಾನಿಕ ಕಾಮಗಾರಿ ಎಂದು ದೂರಿದ್ದಾರೆ.

- Advertisement -


ಈ ರೀತಿ ಪಿಲ್ಲರ್ ಕುಸಿಯುತ್ತಿರುವ ಬೆಳವಣಿಗೆಯಿಂದ ಆತಂಕಗೊಂಡಿರುವ ಸ್ಥಳೀಯರು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಇದರಲ್ಲೂ 40% ಕಮಿಷನ್ ಹಾವಳಿ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

Join Whatsapp