ಬಂಟ್ವಾಳ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲ್ಲಡ್ಕದಲ್ಲಿ ಜನಸಾಮಾನ್ಯರು ನಡೆಯಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲಾಗಿದ್ದು, ಕಲ್ಲಡ್ಕದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ವಾಹನ ಸವಾರರು ಸದ್ಯ ನರಕ ಯಾತನೆಯನ್ನೇ ಅನುಭವಿಸುತ್ತಿದ್ದಾರೆ.
ಅರೆಬರೆ ಕಾಮಗಾರಿಯಿಂದಾಗಿ ಹೊಂಡಗುಂಡಿಗಳಲ್ಲಿ ನೀರು ನಿಂತು ,ಹೆದ್ದಾರಿಯುದ್ದಕ್ಕೂ ರಸ್ತೆಯನ್ನು ಹುಡುಕಿಕೊಂಡು ಸಂಚಾರ ನಡೆಸಬೇಕಾದ ಸ್ಥಿತಿ ಸವಾರದ್ದಾಗಿದೆ.
ಬಿ.ಸಿ. ರೋಡು–ಅಡ್ಡಹೊಳೆವರೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ಬೇಸಿಗೆ ಕಾಲದಲ್ಲಿ ಆರಂಭವಾಗಿದ್ದು, ಬೇಸಿಗೆ ಕಾಲದಲ್ಲಿ ಧೂಳಿನ ಸಮಸ್ಯೆಯಾದರೆ ಮಳೆಗಾಲದಲ್ಲಿ ಹೊಂಡಗುಂಡಿ, ರಸ್ತೆ ತುಂಬಾ ನೀರಿನ ಸಮಸ್ಯೆ. ಸಾರ್ವಜನಿಕರು ಪರದಾಡುವಂತಹ ನಿರ್ಮಾಣವಾಗಿದೆ.
ಕೂಡಲೇ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.