ಕಲ್ಲಡ್ಕ: ಮೂರನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಮೃತ್ಯು
Prasthutha: May 27, 2022

ಬಂಟ್ವಾಳ: 6 ನೇ ತರಗತಿಯ ವಿದ್ಯಾರ್ಥಿಯೋರ್ವ ಆಯ ತಪ್ಪಿ ಮೂರನೇ ಮಹಡಿಯ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ಮಹಮ್ಮದ್ ಸಾಹಿಲ್ (10) ಮೃತಪಟ್ಟ ಬಾಲಕ ಎಂದು ತಿಳಿದು ಬಂದಿದೆ.
ಕಲ್ಲಡ್ಕ ಸಮೀಪದ ಗೊಳ್ತಮಜಲು ಎಂಬಲ್ಲಿರುವ ಸಿಟಿಪ್ಲಾಜಾ ರೆಸಿಡೆನ್ಸಿಯ ಮೂರನೇ ಮಹಡಿಯ ಸಿಟೌಟ್ ನಲ್ಲಿ ಸಾಹಿಲ್ ಗೆಳೆಯರ ಜೊತೆ ಆಟ ಆಡುತ್ತಿದ್ದ. ಈ ವೇಳೆ ಆಯ ತಪ್ಪಿ ಮೂರನೇ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದಿದ್ದಾನೆ.
ಬಳಿಕ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
