ಉಳ್ಳಾಲ: ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ನಾಳೆ ಉಳ್ಳಾಲ ಮುಸ್ಲಿಮ್ ಒಕ್ಕೂಟ ಪ್ರತಿಭಟನೆಗೆ ಕರೆ ನೀಡಿದೆ.
ಮುಸ್ಲಿಮ್ ಒಕ್ಕೂಟ ಉಳ್ಳಾಲ, ಕಲ್ಲಡ್ಕ ಭಟ್ಟನ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ನಾಳೆ ಡಿಸೆಂಬರ್ 28 ರಂದು ಪೂರ್ವಾಹ್ನ ಗಂಟೆ 11.00 ಕ್ಕೆ ಉಳ್ಳಾಲದ ಅಬ್ಬಕ್ಕ ವೃತ್ತದ ಬಳಿ ಸಾಮೂಹಿಕ ಶಾಂತಿಯುತ ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆಯ ಪದಾಧಿಕಾರಿಗಳಾದ ಅಬ್ದುಲ್ ರಹಿಮಾನ್ ಉಳ್ಳಾಲ,ಇಸ್ಮಾಯಿಲ್ ಉಳ್ಳಾಲ,ಖಲೀಲ್ ಮತ್ತು ಜೊತೆ ಕಾರ್ಯದರ್ಶಿ ಬಾತಿಷ್ ಉಳ್ಳಾಲ ಹೇಳಿಕೆ ನೀಡಿದ್ದಾರೆ.