ಕಳಸಾ ಬಂಡೂರಿ ಕಾಮಗಾರಿಗೆ ಅದೇಶ; ‘ಕಮಲ’ದ ಕಾಲೆಳೆದ ‘ಕೈ’ ನಾಯಕರು

Prasthutha|

ಬೆಂಗಳೂರು: ಕಳಸಾ ಬಂಡೂರಿ ಕಾಮಗಾರಿ ಪ್ರಾರಂಭಿಸಲು ರಾಜ್ಯ ಸರಕಾರ ಮುಂದಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಿ ಎಂ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜನವರಿ 2ರಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ‘ಮಹದಾಯಿ ಜನಾಂದೋಲನ’ ಕ್ಕೆ ಹೆದರಿ ತರಾತುರಿಯಲ್ಲಿ ಕಳಸಾ ಬಂಡೂರಿ ಕಾಮಗಾರಿಗೆ ಅದೇಶ ಹೊರಡಿಸಲಾಗಿದೆ.ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಹದಾಯಿ ಯೋಜನೆಗೆ ಇದ್ದ ಅಡೆತಡೆ ನಿವಾರಿಸಿ ಯೋಜನೆ ಜಾರಿ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಇಲ್ಲಿಯವರೆಗೂ ಮಾಡಿರಲಿಲ್ಲ. ಅಧಿಸೂಚನೆ ಹೊರಡಿಸಿ ಎರಡು ವರ್ಷ ಆಗಿದೆ. ಇಲ್ಲಿಯವರೆಗೂ ಸುಮ್ಮನಿದ್ದ ಕೇಂದ್ರ ಸರ್ಕಾರ, ಚುನಾವಣೆ ಹೊತ್ತಿಗೆ ಇದಕ್ಕೆ ಅನುಮೋದನೆ ಕೊಟ್ಟಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಹಮ್ಮಿಕೊಂಡಿರುವ ಆಂದೋಲನವು ಎಂಟು ವರ್ಷ ಅಧಿಕಾರದ ಗಾಢ ನಿದ್ರೆಯಲ್ಲಿ ಮಲಗಿದ್ದ ಮೋದಿ ಸರ್ಕಾರವನ್ನು ಎಬ್ಬಿಸಿದೆ. ವಿಳಂಬವಾಗಿ ನೀಡಿರುವ ಅನುಮೋದನೆಯು ಬಿಜೆಪಿ ಮಾಡಿರುವ ಮಹಾದ್ರೋಹ. ಇದನ್ನು ಕನ್ನಡಿಗರು, ಅದರಲ್ಲೂ ಹುಬ್ಬಳ್ಳಿ ಧಾರವಾಡ, ಬೆಳಗಾವಿ ಜನರು ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಹೇಳಿದ್ದಾರೆ.



Join Whatsapp