ಕಲಬುರ್ಗಿ: ಹಾಡ ಹಗಲೇ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರ್ಗಿ ಜಿಲ್ಲೆಯ ತಾವರಗೇರಾ ಕ್ರಾಸ್ ಬಳಿ ನಡೆದಿದೆ.
ಕೂಲಿ ಕೆಲಸಕ್ಕೆಂದು ಹೋಗಿದ್ದ ಇಬ್ಬರು ಮಹಿಳೆಯರನ್ನು ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ. ಶರಣಮ್ಮ (51) ಮತ್ತು ಚಂದಮ್ಮ (53) ಕೊಲೆಯಾಗಿರುವ ಮಹಿಳೆಯರು.
ಕಲಬುರ್ಗಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.